Showing posts with label ತಂಬುಳಿ. Show all posts
Showing posts with label ತಂಬುಳಿ. Show all posts

ಹಸಿ ಜೀರಿಗೆ ತಂಬುಳಿ

ಬೇಕಾಗುವ ಪದಾರ್ಥಗಳು:
  • ಹಸಿ ಜೀರಿಗೆ 1 ಚಮಚ, 
  • ತೆಂಗಿನ ತುರಿ 2 -3 ಚಮಚ, 
  • ಕಡೆದ ಮಜ್ಜಿಗೆ-1/2 ಲೀಟರ್, 
  • ಉಪ್ಪು- ರುಚಿಗೆ ತಕ್ಕಷ್ಟು. 

ಮಾಡುವ ವಿಧಾನ:
  • ಜೀರಿಗೆ, ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. 
  • ಇದಕ್ಕೆ ಮಜ್ಜಿಗೆ ಹಾಗೂ ಉಪ್ಪು ಸೇರಿಸಿ ಹದ ಮಾಡಿ. 

ಉಪಯೋಗಗಳು:
  • ಅನ್ನದೊಂದಿಗೆ ತಿನ್ನಲು ಅತ್ಯಂತ ರುಚಿ. ತೆಳ್ಳಗೆ ಮಾಡಿದರೆ ಕುಡಿಯಲು ಹಿತಕರ. 
  • ಹೊಟ್ಟೆಯ ವಾಯು, ಉಬ್ಬರ ಹಾಗೂ ಇನ್ನಿತರ ಜೀರ್ಣ ಸಂಬಂಧೀ ತೊಂದರೆಗಳಿಗೆ ರಾಮಬಾಣ.

ಕೃಪೆ: ಕವಿತಾ ಭಟ್, ಹಾಸನ.

ಜೀರಿಗೆ ತಂಬುಳಿ / jeerige tambli


ಬೇಕಾಗುವ ಪದಾರ್ಥಗಳು : 
  
  1.  ಜೀರಿಗೆ - ೧ ಚಮಚ
  2. ಕೆಂಪು ಮೆಣಸು - ೪
  3. ತೆಂಗಿನ ತೂರಿ - ೨ ಚಮಚ
  4. ಮೊಸರು  - ೧ ಲೋಟ
  5. ಸಾಸಿವೆ - ೧/೨ ಚಮಚ 
  6. ಕರಿಬೇವಿನ ಎಲೆ - ೫-೬
  7. ತುಪ್ಪ - ೧ ಚಮಚ 
  8. ಇಂಗು - ಚಿಟಿಕೆ
  9. ಉಪ್ಪು - ರುಚಿಗೆ
ಮಾಡುವ ವಿಧಾನ : 
  • ಮೊದಲು ಒಂದು ಚಮಚ ತುಪ್ಪದಲ್ಲಿ ತೆಂಗಿನ ತುರಿ, ಜೀರಿಗೆ ಹಾಗು ಕೆಂಪು ಮೆಣಸನ್ನು ಸ್ವಲ್ಪ ಕೆಂಪಗೆ ಹುರಿದುಕೊಳ್ಳಿ.
  • ನಂತರ ಈ ಮಿಶ್ರಣವನ್ನು, ಸ್ವಲ್ಪ ನೀರು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
  • ಇದಕ್ಕೆ ಮೊಸರು, ಉಪ್ಪು ಸೇರಿಸಿ ಮತ್ತೊಮ್ಮೆ ರುಬ್ಬಿ.
  • ರುಬ್ಬಿದ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ.
  • ತುಪ್ಪದಲ್ಲಿ ಸಾಸಿವೆ, ಇಂಗು, ಕರಿಬೇವಿನ ಎಲೆ ಹಾಕಿ ಒಗ್ಗರಣೆ ಮಾಡಿಕೊಂಡು, ಮೇಲಿನ ಮಿಶ್ರಣಕ್ಕೆ ಸೇರಿಸಿ.
ಉಪಯುಕ್ತ ಮಾಹಿತಿ :
  • ಇದನ್ನು ತೆಳುವಾಗಿ ಮಾಡಿಕೊಂಡಲ್ಲಿ ಕುಡಿಯಲೂಬಹುದು.
  • ಜೀರ್ಣಕಾರಿಯೂ ಹೌದು.
ಕೃಪೆ: ಸೌಮ್ಯ ಹೆಗಡೆ

ನೆಲನೆಲ್ಲಿ ಸೊಪ್ಪಿನ ತಂಬುಳಿ


ಆರೋಗ್ಯದಾಯಕ ನೆಲನೆಲ್ಲಿ ಸೊಪ್ಪಿನ ತಂಬುಳಿ


ನೆಲನೆಲ್ಲಿಗೆ ಸಂಸ್ಕೃತದಲ್ಲಿ ಭೂಮ್ಯಾಮಲಕಿ, ಹಿಂದಿಯಲ್ಲಿ ಪಾತಾಲ ಆಂವಲಾ ಹಾಗೂ ಇಂಗ್ಲೀಷಿನಲ್ಲಿ"Phyllanthus Amarus" ಎಂದೂ ಕರೆಯುತ್ತಾರೆ. ಇದು ಮಳೆಗಾಲದಲ್ಲಿ ಬೆಳೆಯುವ ಪುಟ್ಟಗಿಡ, ತರಕಾರಿಗಿಡಗಳೊಡನೆ ಕಳೆಯಾಗಿ ಬೆಳೆಯುತ್ತದೆ. ಇದರೆಲೆಗಳು ಬೆಟ್ಟದ ನೆಲ್ಲಿಯಂತಿದ್ದರೂ ಆಕಾರದಲ್ಲಿ ಬಲು ಚಿಕ್ಕದಾಗಿರುತ್ತವೆ. ಹಳದಿ ಬಣ್ಣದ ಹೂವುಗಳನ್ನು ಹೊಂದಿರುವ ಈ ಗಿಡದಲ್ಲಿ ಅಗಸ್ಟ್-ಸಪ್ಟೆಂಬರ್ ತಿಂಗಳಿನಲ್ಲಿ ಸಣ್ಣ ಸಣ್ಣ ಹಸಿರು ಬಣ್ಣದ ಗುಂಡಾಕಾರದ ಕಾಯಿಗಳನ್ನು ಕಾಣಬಹುದಾಗಿದೆ.

ನೆಲನೆಲ್ಲಿಯ ಸೊಪ್ಪು ಹಲವು ವಿಧದಲ್ಲಿ ಉಪಯುಕ್ತವಾಗಿದೆ. ಕಾಮಾಲೆಗೆ, ಉದರಶೂಲೆಗೆ ಶ್ಲೇಷ್ಮಾತೀಸಾರಕ್ಕೆ ಹಾಗೂ ಕಣ್ಣು ನೋವಿಗೆ ಇದರ ಸೊಪ್ಪು ದಿವ್ಯೌಷಧಿಯಾಗಿದೆ. ಅಲ್ಲದೇ ಪಿತ್ತಜನಕಾಂಗದ ಸಮಸ್ಯೆಗಳಿಗೂ ಇದನ್ನು ಔಷಧವನ್ನಾಗಿ ಉಪಯೋಗಿಸುತ್ತಾರೆ. ಇದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವೈದ್ಯ ಎ.ಅರ್.ಎಂ.ಸಾಹೇಬ್ ಅವರ "ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು" ಎಂಬ ಪುಸ್ತಕವನ್ನು ಓದಬಹುದು. ನೆಲನೆಲ್ಲಿಯ ಚಿತ್ರಗಳಿಗಾಗಿ ಈ ಕೆಳಗಿನ ಲಿಂಕ್‌ಅನ್ನು ನೋಡಿ.


ನೆಲನೆಲ್ಲಿ ತಂಬುಳಿಗೆ ಬೇಕಾಗುವ ಸಾಮಗ್ರಿಗಳು-

* ನೆಲನೆಲ್ಲಿ ಸೊಪ್ಪು - ಒಂದು ಹಿಡಿ ಅಥವಾ ಮುಷ್ಟಿಯಷ್ಟು
* ಜೀರಿಗೆ - ೧/೪ ಚಮಚ
* ಬಿಳೇ ಎಳ್ಳು - ೧/೪ ಚಮಚ
* ಕರಿಮೆಣಸಿನ ಕಾಳು(ಪೆಪ್ಪರ್) - ೨-೩
* ಇಂಗು - ಚಿಟಿಗೆಯಷ್ಟು
* ಕಾಯಿತುರಿ - ೧/೪ ಭಾಗ
* ಕಡೆದ ಮಜ್ಜಿಗೆ - ಒಂದು ಲೋಟ
* ಬೆಲ್ಲ - ರುಚಿಗೆ ತಕ್ಕಷ್ಟು (ಸಿಹಿ ಆಗದವರು ಬೆಲ್ಲವನ್ನು ಹಾಕದೆಯೂ ಮಾಡಬಹುದು)
* ಉಪ್ಪು - ರುಚಿಗೆ ತಕ್ಕಷ್ಟು
* ತುಪ್ಪ - ೧-೨ ಚಮಚ

ಮಾಡುವ ವಿಧಾನ

* ಮೊದಲಿಗೆ ನೆಲನೆಲ್ಲಿ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಬೇಕು.
* ಬಾಣಲೆಯಲ್ಲು ತುಪ್ಪವನ್ನು ಹಾಕಿ ಜೀರಿಗೆ, ಎಳ್ಳು, ಕರಿಮೆಣಸಿನ ಕಾಳು ಹಾಗೂ ಇಂಗನ್ನು ಹಾಕಿ ಹುರಿಯಬೇಕು. ಹಾಕಿದ ಪದಾರ್ಥ ಚಟಗುಡುತ್ತಲೇ, ಇದಕ್ಕೆ ಹೆಚ್ಚಿಟ್ಟ ನೆಲನೆಲ್ಲಿ ಸೊಪ್ಪನ್ನೂ ಹಾಕಿ ಚೆನ್ನಾಗಿ ಹುರಿದು ತಣಿಸಬೇಕು.
* ಚೆನ್ನಾಗಿ ತಣಿದ ನಂತರ ಕಾಯಿತುರಿಯೊಂದಿಗೆ ಬೀಸಿ, ಸೋಸಿ ರಸವನ್ನು ಹಿಂಡಬೇಕು. ಜಿಗುಟನ್ನು ತೆಗೆಯಬೇಕು.
* ಸೋಸಿದ ರಸಕ್ಕೆ ಕಡೆದ ಮಜ್ಜಿಗೆ, ಉಪ್ಪು ಹಾಗೂ ಬೆಲ್ಲವನ್ನು ಹಾಕಿದರೆ ರುಚಿಕರ ಹಾಗೂ ಆರೋಗ್ಯಕರ ತಂಬುಳಿ ತಯಾರೆನ್ನಬಹುದು.

ನೆಲನೆಲ್ಲಿ ಸೊಪ್ಪಿನಿಂತ ಚಟ್ನಿಯನ್ನೂ ತಯಾರಿಸಬಹುದು. ಬಹೋಪಯೋಗಿಯಾಗಿರುವ ಇದು ಸುಲಭದಲ್ಲಿ 
ಬೆಳೆಯುವಂತಹದ್ದೂ ಆಗಿದೆ.

Contributed By: 
Rajesh Hegde (hegderajesh33@gmail.com)

ಪಾಲಕ್ ಸೊಪ್ಪಿನ ತಂಬಳಿ




ಬೇಕಾಗುವ ಪದಾರ್ಥಗಳು : 
  • ಪಾಲಕ್ ಸೊಪ್ಪು - ಒಂದು ಕಟ್ಟು.
  • ಜೀರಿಗೆ- 2 tbs
  • ಕಾಳು ಮೆಣಸು - 3
  • ಹಸಿ ಮೆಣಸು- 1
  • ಮೊಸರು - 1 ಕಪ್
  • ನೀರು ಬೆಲ್ಲ - 1/2 tbs
  • ಅಡುಗೆ ಎಣ್ಣೆ - 1 tbs
  • ಕಾಯಿ ತುರಿ - 3 tbs
  • ರುಚಿಗೆ ಬೇಕಷ್ಟು ಉಪ್ಪು
ಮಾಡುವ ವಿಧಾನ :
  • 1 ಚಮಚ ಅಡುಗೆ ಎಣ್ಣೆ + ಸ್ವಲ್ಪ ಜೀರಿಗೆ + ಜಜ್ಜಿದ ಹಸಿ ಮೆಣಸು ಅಥವಾ ಕಾಳು ಮೆಣಸು : ಇವನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ.
  • ಚೆನ್ನಾಗಿ ತೊಳೆದು ಕತ್ತರಿಸಿದ ಪಾಲಕ್ ಸೊಪ್ಪನ್ನು ಬಾಂಡ್ಲಿಗೆ ಹಾಕಿ.
  • ಹದವಾದ ಬೆಂಕಿಯ ಉರಿಯಲ್ಲಿ 5-6 ನಿಮಿಷ ಬೇಯಿಸಿ (ಸೊಪ್ಪು ಬೇಯುವವರೆಗೆ)
  • ಗ್ಯಾಸ್ ಬಂದು ಮಾಡಿ, ಬಾಂಡ್ಲಿ ತಂಪಾಗಲು ಬಿಡಿ.
  • ಈ ಮಿಶ್ರಣ + 3 tbs ಕಾಯಿತುರಿ + ನೀರು ಬೆಲ್ಲ + ಉಪ್ಪು + ಸ್ವಲ್ಪ ನೀರು :: ಎಲ್ಲ ಹಾಕಿ ಮಿಕ್ಸಿಯಲ್ಲಿ ರುಬ್ಬಿ.
  • ಈ ಮೇಲಿನ ಮಿಶ್ರಣವನ್ನು ಮೊಸರಿಗೆ ಹಾಕಿ.(ಮೊಸರನ್ನು ಹಾಕಿಯೂ ಮಿಕ್ಸಿಯಲ್ಲಿ ರುಬ್ಬಬಹುದು)
  • ಪಾಲಕ್ ಸೊಪ್ಪಿನ ತಂಬಳಿ ತಯಾರು ...

ಇತರೆ ಮಾಹಿತಿ:  

  • ಮಾಡಲು ಬೇಕಾಗುವ ಸಮಯ 10 ನಿಮಿಷ.   
  • ಇದನ್ನು ಪ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.
  • ಇದನ್ನು ಸೋಸಿ ಕುಡಿಯಲೂ ಬಳಸಬಹುದು.

ಒಂದೆಲಗದ ಕುಡಿ ತಂಬಳಿ


ಬೇಕಾಗುವ ಪದಾರ್ಥಗಳು :
  • ಒಂದೆಲಗದ ಸೊಪ್ಪು -- 15
  • ಜೀರಿಗೆ - 1/2 ಚಮಚ
  • ಎಳ್ಳು - 1/2 ಚಮಚ
  • ಸಾಸಿವೆ - 1/2 ಚಮಚ
  • ಒಣ ಮೆಣಸು - 2
  • ಕಾಯಿತುರಿ - 1/2 ಕಪ್
  • ಉಪ್ಪು - 1 ಚಮಚ
  • ಅಡುಗೆ ಎಣ್ಣೆ
ಮಾಡುವ ವಿಧಾನ :
  • ಒಂದೆಲಗದ ಸೊಪ್ಪನ್ನು ನುಣ್ಣಗೆ ಬೀಸಿ, ಅರಿಸಿ ಇಟ್ಟುಕೊಳ್ಳಿ
  • ತೆಂಗಿನಕಾಯಿ + ಸ್ವಲ್ಪ ಜೀರಿಗೆ + ಸ್ವಲ್ಪ ಎಳ್ಳು : ಇವನ್ನು ಮಿಕ್ಸಿಯಲ್ಲಿ ರುಬ್ಬಿ -- ನಂತರ ಒಂದೆಲಗದ ರಸಕ್ಕೆ ಸೇರಿಸಿ.
  • ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ
  • ಈಗ : ಎಣ್ಣೆ + ಒಣಮೆಣಸು + ಎಳ್ಳು + ಜೀರಿಗೆ + ಸಾಸಿವೆ : ಇವುಗಳ ಒಗ್ಗರಣೆ ನೀಡಿ
  • ಒಂದೆಲಗದ ಕುಡಿ ತಂಬಳಿ ಈಗ ಸವಿಯಲು ತಯಾರು !!!
ಇತರೆ ಮಾಹಿತಿ :
  • ಸಿಹಿ ಬೇಕಾಗುವವರು ಸ್ವಲ್ಪ ಆಲೆಮನೆ ಬೆಲ್ಲ ಸೇರಿಸಬಹುದು.
  • ಜ್ವರ, ನೆಗಡಿ, ಕೆಮ್ಮಿಗೆ ಈ ತಂಬಳಿ ಒಂದು ಔಷಧವೂ ಹೌದು.
  • ಒಂದೆಲಗದ ಸೊಪ್ಪಿನ ರಸ + ಬೆಲ್ಲ + ನೀರು + ಬೋಳುಕಾಳಿನ ಹುಡಿ ಹಾಕಿ ಕುದಿಸಿ > ಹಾಲು ಹಾಕಿ > ಕಷಾಯದಂತೆ ಕುಡಿಯಬಹುದು.
  • ಮಾಡಲು ಬೇಕಾಗುವ ಸಮಯ 10 ನಿಮಿಷ.
ಕೃಪೆ : ShubhaNaveen Hegde, Bangalore.

ಎಲವರಿಗೆ ಕುಡಿ ತಂಬಳಿ


ಎಲವರಿಗೆ ಕುಡಿ ತಂಬಳಿ ಹವ್ಯಕರ ತಂಬಳಿಯ ಇನ್ನೊಂದು ಬಗೆ.
ಬೇಕಾಗುವ ಪದಾರ್ಥಗಳು :
  • ಎಲವರಿಗೆ ಕುಡಿ - 1 ಹಿಡಿ.
  • ಕಾಯಿತುರಿ - 1/2 ಕಪ್
  • ಕಡೆದ ಮಜ್ಜಿಗೆ - 1 ಕಪ್
ಒಗ್ಗರಣೆಗೆ :
  • ಜೇರಿಗೆ - 1 ಚಮಚ
  • ಕಾಳು ಮೆಣಸು (ಬೋಳುಕಾಳು) - 8 ರಿಂದ 10
ಮಾಡುವ ವಿಧಾನ :
  • ಮೊದಲು ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ 1 ಚಮಚ ಜೇರಿಗೆಯನ್ನು ಹಾಕಬೇಕು.
  • ನಂತರ ಕಾಳುಮೆಣಸು (10) ಹಾಕಬೇಕು.
  • ಆಮೇಲೆ ಎಲಾವರಿಗೆ ಕುಡಿ ಹಾಕಿ ಹುರಿಯಬೇಕು.
  • ಎಲವರಿಗೆ ಸೊಪ್ಪು ಗರಿಗರಿಯಾದ ನಂತರ ಮಿಕ್ಸಿಯಲ್ಲಿ ಕಾಯಿತುರಿ ಜೊತೆ ನೀರು ಹಾಕಿ ರುಬ್ಬಿಕೊಳ್ಳಬೇಕು.
  • ರುಬ್ಬಿಕೊಂಡ ಮಿಶ್ರಣವನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ 1 ಕಪ್ ಮಜ್ಜಿಗೆ ಸೇರಿಸಬೇಕು.
  • ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
  • ಕೊನೆಯಲ್ಲಿ ಸಾಸಿವೆ ಒಗ್ಗರಣೆಯನ್ನು ಹಾಕಿದರೆ ತಂಬಳಿ ರೆಡಿ
ಇತರೆ ಮಾಹಿತಿ :
  • ಮಾಡಲು ಬೇಕಾಗುವ ಸಮಯ 10 ನಿಮಿಷ.
  • ಮಜ್ಜಿಗೆ ಸೇರಿಸದೇ ಇದ್ದರೆ 1 ದಿನ ಇಡಬಹುದು.
  • ಬೇಸಿಗೆಯಲ್ಲಿ ಈ ತಂಬಳಿ ದೇಹಕ್ಕೆ ತಂಪು ನೀಡುತ್ತದೆ.
  • ಅನ್ನದ ಜೊತೆ ಕಲಸಿ ಉಟಮಾಡಬಹುದು.
  • ಉಟದ ಜೊತೆ / ನಂತರ ಪಾನೀಯದ ಹಾಗೆ ಕುಡಿಯಬಹುದು.
  • ಈ ತಂಬಳಿಯ ಇನ್ನೊಂದು ಹೆಸರು ಹಸಿರು ತಂಬಳಿ.
ಕೃಪೆ : Vinuta Hegde Keshinmane, Netherlands.

ಮಾವಿನ ಕಾಯಿ ತಂಬಳಿ


ಹವ್ಯಕರಿಗೆ ಬೇಸಿಗೆಗಾಲದಲ್ಲಿ ಬೇಕೇಬೇಕಾದ ತಂಬಳಿ ಅಂದರೆ ಅದೇ ಮಾವಿನಕಾಯಿ ತಂಬಳಿ................................

ಬೇಕಾಗುವ ಪದಾರ್ಥಗಳು :
  • ಹುಳಿಮಾವಿನಕಾಯಿ - 1
  • ತೆಂಗಿನಕಾಯಿ ತುರಿ - 1/2 ಕಪ್
  • ಉದ್ದಿನಬೇಳೆ - 1 ಚಮಚ
  • ಎಳ್ಳು - 1 ಚಮಚ
  • ಹಸಿಮೆಣಸು - 2
  • ಕರಿಬೇವಿನ ಸೊಪ್ಪು - 5 ರಿಂದ 6 ಎಲೆಗಳು
  • ಕೊಬ್ಬರಿ ಎಣ್ಣೆ - 2ಚಮಚ
  • ಉಪ್ಪು - 2 ಚಮಚ
  • ಕಡೆದ ಮಜ್ಜಿಗೆ - 1 ಕಪ್
  • ಸಾಸಿವೆ - 1 ಚಮಚ
ಮಾಡುವ ವಿಧಾನ :
  • ಮೊದಲಿಗೆ ಮಾವಿನ ಕಾಯಿಯನ್ನು ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೊಳುಗಳಾಗಿ ಮಾಡಬೇಕು.
  • ಒಗ್ಗರಣೆಗೆ ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ 1 ಚಮಚ ಉದ್ದಿನಬೇಳೆ, ಹಸಿಮೆಣಸು 2, ಎಳ್ಳು 1 ಚಮಚ ಹಾಕಿ ಹುರಿಯಬೇಕು.
  • ಇದನ್ನು ( ಒಗ್ಗರಣೆಯನ್ನು ) ಕಾಯಿತುರಿಯೊಂದಿಗೆ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.
  • ರುಬ್ಬಿದ ಮಿಶ್ರಣವನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
  • ನಂತರ ಕಡೆದ ಮಜ್ಜಿಗೆಯನ್ನು ಸೇರಿಸಬೇಕು.
  • ಕೊನೆಯಲ್ಲಿ ಮತ್ತೆ ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಇಂಗು, ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಸೇರಿಸಬೇಕು.


ಈಗ ಮಾವಿನಕಾಯಿ ತಂಬಳಿ ಅನ್ನದ ಜೊತೆಗೆ ಸವಿಯಲು ರೆಡಿ.
ರುಚಿ ನೋಡಿ.
ಕೃಪೆ : Vinuta Hegde Keshinmane, Netherlands.