Showing posts with label ಗೊಜ್ಜು. Show all posts
Showing posts with label ಗೊಜ್ಜು. Show all posts

ಅರಿಸಿನ ಕೊಂಬಿನ ಗೊಜ್ಜು ಅಥವಾ ಬಾಳಂತಿ ಗೊಜ್ಜು


ಬೇಕಾಗುವ ಪದಾರ್ಥಗಳು:


  • ಹಸಿ ಅರಿಸಿನ ಕೊಂಬು ಅಥವಾ ಬೇರು - ೧ ಕಪ್
  • ಉಪ್ಪು -  ೧ ಚಮಚ (ರುಚಿಗೆ ತಕ್ಕಷ್ಟು)
  • ಬೆಲ್ಲ - ಅರ್ಧ ಕಪ್ (ರುಚಿಗೆ ತಕ್ಕಷ್ಟು) 
  • ಹುಳಿಸೆ ಹಣ್ಣು - ಸುಲಿದ ಅಡಿಕೆಯಷ್ಟು ಪ್ರಮಾಣ.
  • ಕಾಯಿತುರಿ - ೧ ಕಪ್
  • ಒಣಮೆಣಸು - ೫
  • ಕೊತ್ತುಂಬರಿ ಕಾಳು - ೧ ಚಮಚ 
  • ಉದ್ದಿನಬೇಳೆ - ೧ ಚಮಚ
  • ಹಿಂಗು - ೧ ಕಡಲೆಕಾಳಿನಷ್ಟು
  • ಎಣ್ಣೆ - ಸ್ವಲ್ಪ ಕೊಬ್ಬರಿ ಎಣ್ಣೆ.


ಮಾಡುವ ವಿಧಾನ:


  • ಅರಿಸಿನ ಬೇರನ್ನು ಸಣ್ಣಗೆ ಹೆಚ್ಚಿ ಅದಕ್ಕೆ + ಉಪ್ಪು + ಬೆಲ್ಲ + ಹುಳಿಸೆ ಹಣ್ಣು +  ೨ ಕಪ್ ನೀರು ಹಾಕಿ - ಅದನ್ನು ಬಾಂಡ್ಲಿಯಲ್ಲಿ ಹದವಾಗಿ ಬೇಯಿಸಿ.
  • ಹುರಿದ ಪದಾರ್ಥ: ಇನ್ನೊಂದು ಪಾತ್ರೆಯಲ್ಲಿ -  ಕೊತ್ತುಂಬರಿ ಕಾಳು + ಸಲ್ಪ ಎಣ್ಣೆ + ಹಿಂಗು + ಉದ್ದಿನಬೇಳೆ -- ಇವನ್ನು ಹಾಕಿ ಹುರಿದು ಇಟ್ಟುಕೊಳ್ಳಿ.
  • ಬೇಯಿಸಿ ತಣ್ಣಗಾಗಿಸಿದ ಅರಿಸಿನ ಮಿಶ್ರಣ + ಹುರಿದ ಪದಾರ್ಥ + ಮೆಣಸು + ಕಾಯಿತುರಿ -- ಇವನ್ನು ಮಿಕ್ಸಿಗೆ ಹಾಕಿ ಬೀಸಿ.
  • ಈಗ ನಿಮ್ಮ ಅರಿಸಿನ ಕೊಂಬಿನ ಗೊಜ್ಜು ತಯಾರು.
  • ಬೀಸಿದ ಗೊಜ್ಜನ್ನು ಬಾಣೆಲೆಯಲ್ಲಿ ಹಾಕಿ ಕುದಿಸಿದರೆ ೨-೩ ದಿನ ಇಟ್ಟರೂ ಕೆಡುವದಿಲ್ಲ.   


ಉಪಯೋಗಗಳು:

  • ಇದು ಶರೀರದ ನಂಜನ್ನು ತೆಗೆಯುತ್ತದೆ ಆದಕಾರಣ ಬಾಳಂತಿಯರಿಗೆ ವಿಶೇಷವಾಗಿ ಕೊಡುತ್ತಾರೆ. 
  • ಇದಕ್ಕೆ ಬಾಳಂತಿ ಗೊಜ್ಜು ಎಂದೂ ಕರೆಯುತ್ತಾರೆ.
  • ಮೈ ತುರಿಸುವಿಕೆಗೂ ಉಪಯುಕ್ತ.


ಕೃಪೆ: ಕಲಾವತಿ ಶಾಂತಾರಮ ಭಟ್ ಮುರೂರು, ಧಾರವಾಡ.

ಓಮ ಕಾಳಿನ ಗೊಜ್ಜು

ಓಮ ಕಾಳಿನ ಗೊಜ್ಜು  

ಬೇಕಾಗುವ ಸಾಮಗ್ರಿಗಳು :
ಓಮದ ಕಾಳು (ಅಜವಾನ) 2 ಚಮಚ
ಒಣಮೆಣಸಿನಕಾಯಿ 6-7 ( ಖಾರ ಹೆಚ್ಚು ಬೇಕಾದ್ರೆ 2 ಹೆಚ್ಚು )
ತೆಂಗಿನ ತುರಿ 8-10 ಚಮಚ
ಹುಣಸೆಹಣ್ಣು, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ :-
ಮೊದಲು ಓಮದ ಕಾಳನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ.
ನಂತರ ಸ್ವಲ್ಪ ಎಣ್ಣೆ ಹಾಕಿ ಒಣಮೆಣಸು ಹುರಿದುಕೊಳ್ಳಿ.
ಕಾಯಿತುರಿ, ಓಮ, ಒಣಮೆಣಸು, ಹುಣಸೆಹಣ್ಣು, ಉಪ್ಪು ಎಲ್ಲವನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ.
ಬಿಸಿ ಬಿಸಿ ಅನ್ನದ ಜೊತೆ ಗಟ್ಟಿಯಾಗಿ ಕಲೆಸಿಕೊಂಡು ಊಟ ಮಾಡಿ.

ಉಪಯೋಗ
ಓಮ ಹಸಿವನ್ನು ಹೆಚ್ಚಿಸುತ್ತದೆ. ಜ್ವರ ಬಂದು ಬಾಯಿರುಚಿ ಕೆಟ್ಟಾಗ ಈ ಗೊಜ್ಜು ಕಲೆಸಿಕೊಂಡು ಊಟ ಮಾಡಿದರೆ ಎರಡು ತುತ್ತು ಹೆಚ್ಚು ತಿನ್ನಬಹುದು.
 
ಕೃಪೆRecipe by : Sandhya HEGDE

ಕನ್ನೆಕುಡಿ (ಸೊರಲೆಕುಡಿ) ಕಟ್ನೆ

ಕನ್ನೆಕುಡಿ ಅಥವಾ ಸೊರಲೆಕುಡಿ ಎಂದರೆ ಮಲೆನಾಡ ಕಡೆ ಅಡಿಗೆಗೆ ಬಳಸುವ ಒಂದು ಬಗೆಯ ಎಲೆ. ಈ ಗಿಡದ ವೈಜ್ಞಾನಿಕ ಹೆಸರು ನನಗೆ ತಿಳಿಯದು. ಇದರ ಗಿಡ ಚಿಕ್ಕ ಪೊದೆಯಂತೆ ಇರುತ್ತದೆ. ಮಳೆಗಾಲದ ಸಮಯದಲ್ಲಿ ಇದರ ಅಡಿಗೆಗಳನ್ನು ಹೆಚ್ಚಾಗಿ ತಯಾರಿಸುತ್ತಾರೆ. ಶೀತ, ಜ್ವರ ಇತ್ಯಾದಿ ಅನಾರೋಗ್ಯ ಕಾಡಿದಾಗ ಕನ್ನೆಕುಡಿಯ ಕಟ್ನೆ ಮಾಡಿಕೊಂಡು ಉಣ್ಣುವುದು ಆರೋಗ್ಯದ ದೃಷ್ಟಿಯಿಂದ ತುಂಬ ಒಳ್ಳೆಯದು.  
ಕನ್ನೆಕುಡಿಯ ಕಟ್ನೆ ಊಟಕ್ಕೆ ತುಂಬ ರುಚಿ. ಕನ್ನೆಕುಡಿಯ ಬದಲು ಪಾಲಕ್ ಸೊಪ್ಪನ್ನು ಬಳಸಿಯೂ ಕಟ್ನೆ ತಯಾರಿಸಬಹುದು.

ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 
ಸರ್ವಿಂಗ್ಸ್ - 4 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಕನ್ನೆಕುಡಿ (ಸೊರಲೆಕುಡಿ) - 25 ಎಲೆಗಳು
ಕಾಳುಮೆಣಸು - 15 
ಜೀರಿಗೆ - 3/4 ಚಮಚ 
ಒಗ್ಗರಣೆಗೆ ಎಣ್ಣೆ 
ಬೆಳ್ಳುಳ್ಳಿ 7 - 8 ಎಸಳು 
ಸಾಸಿವೆ - 1/4 ಚಮಚ 
ರುಚಿಗೆ ತಕ್ಕಷ್ಟು ಉಪ್ಪು
ನಿಂಬೆಹಣ್ಣು - 1 
ತೆಂಗಿನತುರಿ - 1 ಕಪ್

ಮಾಡುವ ವಿಧಾನ:
ಕನ್ನೆಕುಡಿ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ತೊಟ್ಟು ಮತ್ತು ಎಲೆಯಲ್ಲಿರುವ ನಾರನ್ನು ತೆಗೆದುಬಿಡಿ.
ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಕಾಯಿಸಿ ಕಾಳುಮೆಣಸು ಹಾಕಿ ಚಟಪಟ ಸದ್ದು ಬರುವವರೆಗೆ ಹುರಿಯಿರಿ. 
ನಂತರ ಜೀರಿಗೆ ಸೇರಿಸಿ ಒಮ್ಮೆ ಕೈಯಾಡಿಸಿ, ಕನ್ನೆಕುಡಿ ಎಲೆಗಳನ್ನು ಸೇರಿಸಿ 2 - 3 ನಿಮಿಷ ಬಾಡಿಸಿ. ಎಲೆಗಳ ಬಣ್ಣ ಬದಲಾಗುತ್ತಿದ್ದಂತೆ ಉರಿಯನ್ನು ಆಫ್ ಮಾಡಿ. 
ಹುರಿದ ಸಾಮಗ್ರಿಗಳನ್ನು ತೆಂಗಿನತುರಿಯೊಡನೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.    
ರುಬ್ಬಿದ ಮಿಶ್ರಣಕ್ಕೆ 3 - 4 ಕಪ್ ನೀರು ಸೇರಿಸಿ ತೆಳ್ಳಗೆ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5 ನಿಮಿಷ ಚೆನ್ನಾಗಿ ಕುದಿಸಿ.
ಕುದಿಸಿ ಇಳಿಸಿದ ನಂತರ ನಿಂಬೆರಸ ಸೇರಿಸಿ. ನಂತರ ಇದಕ್ಕೆ ಸಾಸಿವೆ ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿ. 
ಬಿಸಿ ಕಟ್ನೆಯನ್ನು ಅನ್ನದೊಡನೆ ಸರ್ವ್ ಮಾಡಿ. ಇದು ಊಟಕ್ಕೂ ರುಚಿ, ಆರೋಗ್ಯಕ್ಕೂ ಹಿತಕರ.

ಟಿಪ್ಸ್:
ನಿಂಬೆರಸದ ಬದಲು ಆಮ್ ಚೂರ್ ಪೌಡರ್ ನ್ನೂ ಬಳಸಬಹುದು. ಆದರೆ ನಿಂಬೆರಸ ಬಳಸುವುದರಿಂದ ಕಟ್ನೆಗೆ ವಿಶೇಷ ಪರಿಮಳ ಬರುತ್ತದೆ.

By : Vani Hegde (http://vanilohit.blogspot.in)

ಕೆಸುವಿನ ಸೊಪ್ಪಿನ ಕರ್ಕ್ಲಿ


ಬೇಕಾಗುವ ಪದಾರ್ಥಗಳು : 
  • ಚೆನ್ನಾಗಿ ತೊಳೆದ ಕೆಸುವಿನ ಸೊಪ್ಪಿನ ಎಲೆ : 1 
  • ಹಸಿಮೆಣಸಿನ ಕಾಯಿ : 2 
  • ಹುಣಿಸೆ ಹಣ್ಣಿನ ರಸ: 2 ಚಮಚ 
  • ಉಪ್ಪು : ರುಚಿಗೆ ತಕ್ಕಷ್ಟು 
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
  • ಬೆಳ್ಳುಳ್ಳಿ : 3-4
  • ಇಂಗು : 1 ಚಿಟಿಕೆ
  • ಓಂ ಕಾಳು: 1 ಚಿಟಿಕೆ
  • ಕೊಬ್ಬರಿ ಎಣ್ಣೆ : 1.5 ಚಮಚ
  • ಸಾಸಿವೆ ಕಾಳು: 1 ಚಮಚ
 ಮಾಡುವ ವಿಧಾನ : 
  • ಕೆಸುವಿನ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ, ಉಪ್ಪು + ಹುಳಿ + ಕತ್ತರಿಸಿದ ಹಸಿಮೆಣಸಿನಕಾಯಿ ಎಲ್ಲವನ್ನು ಬಾಂಡ್ಲಿಯಲ್ಲಿ ಹಾಕಿ ಚೆನ್ನಾಗಿ ಬೇಯಿಸಿ.
  • ಆ ಮಿಶ್ರಣ ಕರಗಿ ಪೇಸ್ಟ್ ಆಗುವಷ್ಟು ಬೇಯಿಸಿ.
  • ಒಗ್ಗರಣೆ: ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಕಾಳು + ಇಂಗು + ಓಂ ಕಾಳು + ಬೆಳ್ಳುಳ್ಳಿ ಇವೆಲ್ಲವನ್ನು ಹಾಕಿ.
  • ಈಗ ಮೇಲೆ ಹೇಳಿದ ಕರ್ಕ್ಲಿಯ ಮಿಶ್ರಣಕ್ಕೆ ಒಗ್ಗರಣೆಯನ್ನು ಸೇರಿಸಿ ಚೆನ್ನಾಗಿ ಕಲಸಿ, ಹತ್ತು ನಿಮಿಷ ಪಾತ್ರೆಯನ್ನು ಮುಚ್ಚಿಡಿ.
  • ಈಗ ಬಾಯಲ್ಲಿ ನೀರೂರಿಸುವ ಕೆಸುವಿನ ಕರ್ಕ್ಲಿ ತಯಾರು !!!
ಇತರೆ ಮಾಹಿತಿ : 
  • ಮಾಡಲು ಬೇಕಾಗುವ ಸಮಯ 10 ನಿಮಿಷ. 
  • ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದು ಸವಿಯಿರಿ.     
 ಕೃಪೆ : Radha Bhat, Mapusa, Goa

ಸಾಂಬಾರು ಸೊಪ್ಪಿನ ಗೊಜ್ಜು (Saambar Soppina Gojju)

ಬೇಕಾಗುವ ಪದಾರ್ಥಗಳು : 
  • ಚೆನ್ನಾಗಿ ತೊಳೆದ ಸಾಂಬಾರು ಸೊಪ್ಪಿನ ಎಲೆ : 15 
  • ತುರಿದ ತೆಂಗಿನಕಾಯಿ : 1 ಕಪ್  
  • ಹುಣಿಸೆ ಹಣ್ಣು : 1/2 ಚಮಚ 
  • ಉಪ್ಪು : ರುಚಿಗೆ ತಕ್ಕಷ್ಟು 
  • ಹಸಿ ಮೆಣಸಿನಕಾಯಿ : 3 (ರುಚಿಗೆ ತಕ್ಕಷ್ಟು)
  • ಕೊಬ್ಬರಿ ಎಣ್ಣೆ : 1.5 ಚಮಚ
  • ಊದ್ದಿನಬೇಳೆ : 2 ಚಮಚ 
  • ಇಂಗು : 1 ಚಿಟಿಕೆ 
  • ಎಳ್ಳು : 1 ಚಮಚ  
 ಮಾಡುವ ವಿಧಾನ : 
  • ಮೊದಲಿಗೆ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಉದ್ದಿನಬೇಳೆ + ಎಳ್ಳು + ಹಸಿಮೆಣಸಿನ ಕಾಯಿ + ಸಾಂಬಾರ್ ಸೊಪ್ಪು à ಇವೆಲ್ಲವನ್ನು ಸೇರಿಸಿ ಹುರಿದು ಇಟ್ಟುಕೊಳ್ಳಿ.
  • ಈಗ ಮಿಕ್ಸರ್ ನಲ್ಲಿ ಮೇಲೆ ಹೇಳಿದ ಹುರಿದ ಪದಾರ್ಥಕ್ಕೆ + ಹುರಿ ತೆಂಗಿನಕಾಯಿ + ಹುಣಿಸೆಹಣ್ಣು + ಉಪ್ಪು + ಇಂಗು + ಸ್ವಲ್ಪ ನೀರು, ಎಲ್ಲವನ್ನೂ ಸೇರಿಸಿ ಚೆನ್ನಾಗಿ ಬೀಸಿ.
  • ಈಗ ನಿಮಗಿಷ್ಟವಾದ ಸಾಂಬಾರ್ ಸೊಪ್ಪಿನ ಗೊಜ್ಜು ತಯಾರು ...
ಇತರೆ ಮಾಹಿತಿ : 
  • ಮಾಡಲು ಬೇಕಾಗುವ ಸಮಯ 10 ನಿಮಿಷ. 
  • ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದು ನೋಡಿ ಹೇಳಿ....  
ಕೃಪೆ : Radha Bhat, Mapusa, Goa

ಹಾಗಲಕಾಯಿ ಕಾಯಿರಸ


ಹವ್ಯಕರ ಅಡುಗೆಯಲ್ಲಿಯ ವಿಶಿಷ್ಟವಾದ ಇನ್ನೊಂದು ಬಗೆ.

ಬೇಕಾಗುವ ಪದಾರ್ಥಗಳು :
ಕಾಯಿತುರಿ : 1/2 ಕಪ್.
ಬೆಲ್ಲ : 2 ಟೇಬಲ್ ಚಮಚ.
ಹಾಗಲಕಾಯಿ : 2.
ಹುಣಸೇ ಹಣ್ಣು : ಸ್ವಲ್ಪ
ಉಪ್ಪು : ರುಚಿಗೆ ತಕ್ಕಷ್ಟು.
ಒಗ್ಗರಣೆಗೆ :
ಕಡ್ಲೆಬೇಳೆ : 2 ಚಮಚ
ಉದ್ದಿನಬೇಳೆ : 2 ಚಮಚ
ಒಣಮೆಣಸು : 4 ರಿಂದ 6
ಇಂಗು : 1 ಚಿಟಿಕೆ
ಎಳ್ಳು : 1 ಚಮಚ.
ಕರಿಬೇವು : 5 ರಿಂದ 8
ಸಾಸಿವೆ : 1 ಚಮಚ.
ಮಾಡುವ ವಿಧಾನ

  • ಮೊದಲಿಗೆ ಹಾಗಲಕಾಯಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಉಪ್ಪು ಹಾಗೂ ಬೆಲ್ಲ ಹಾಕಿ ಬೇಯಿಸಿಟ್ಟುಕೊಳ್ಳಬೇಕು.
  • ಬಾಣಲಿಯಲ್ಲಿ ಅಡುಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಕಡ್ಲೆಬೇಳೆ ಹಾಕಿ ಹುರಿಯಬೇಕು. ನಂತರ ಉದ್ದಿನಬೇಳೆ ಹಾಕಬೇಕು.
  • ಆಮೇಲೆ ಒಣಮೆಣಸು + ಇಂಗು + ಎಳ್ಳು ಹಾಕಿ ಹುರಿಯಬೇಕು.
  • ಮಿಕ್ಸಿಯಲ್ಲಿ ಕಾಯಿತುರಿ, ಹುಣಸೇ ಹಣ್ಣು ಜೊತೆಗೆ ಒಗ್ಗರಣೆಯನ್ನು ಹಾಕಿ ರುಬ್ಬಿಕೊಳ್ಳಬೇಕು.
  • ಬೇರೆ ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಸಾಸಿವೆ + ಕರಿಬೇವು ಹಾಕಿ ನಂತರ ಬೇಯಿಸಿಟ್ಟುಕೊಂಡ ಹಾಗಲಕಾಯಿ ಸೇರಿಸಬೇಕು.
  • ಕೊನೆಯಲ್ಲಿ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು.

ಕೃಪೆ : Vinuta Hegde Keshinmane, Netherlands.