ಬೇಕಾಗುವ ಪದಾರ್ಥಗಳು
:
- ಚೆನ್ನಾಗಿ ತೊಳೆದ ಕೆಸುವಿನ ಸೊಪ್ಪಿನ ಎಲೆ : 1೦
- ಹಸಿಮೆಣಸಿನ ಕಾಯಿ : 2
- ಹುಣಿಸೆ ಹಣ್ಣಿನ ರಸ: 2 ಚಮಚ
- ಉಪ್ಪು : ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- ಬೆಳ್ಳುಳ್ಳಿ : 3-4
- ಇಂಗು : 1 ಚಿಟಿಕೆ
- ಓಂ ಕಾಳು: 1 ಚಿಟಿಕೆ
- ಕೊಬ್ಬರಿ ಎಣ್ಣೆ : 1.5 ಚಮಚ
- ಸಾಸಿವೆ ಕಾಳು: 1 ಚಮಚ
ಮಾಡುವ ವಿಧಾನ
:
- ಕೆಸುವಿನ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ, ಉಪ್ಪು + ಹುಳಿ + ಕತ್ತರಿಸಿದ ಹಸಿಮೆಣಸಿನಕಾಯಿ ಎಲ್ಲವನ್ನು ಬಾಂಡ್ಲಿಯಲ್ಲಿ ಹಾಕಿ ಚೆನ್ನಾಗಿ ಬೇಯಿಸಿ.
- ಆ ಮಿಶ್ರಣ ಕರಗಿ ಪೇಸ್ಟ್ ಆಗುವಷ್ಟು ಬೇಯಿಸಿ.
- ಒಗ್ಗರಣೆ: ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಕಾಳು + ಇಂಗು + ಓಂ ಕಾಳು + ಬೆಳ್ಳುಳ್ಳಿ ಇವೆಲ್ಲವನ್ನು ಹಾಕಿ.
- ಈಗ ಮೇಲೆ ಹೇಳಿದ ಕರ್ಕ್ಲಿಯ ಮಿಶ್ರಣಕ್ಕೆ ಒಗ್ಗರಣೆಯನ್ನು ಸೇರಿಸಿ ಚೆನ್ನಾಗಿ ಕಲಸಿ, ಹತ್ತು ನಿಮಿಷ ಪಾತ್ರೆಯನ್ನು ಮುಚ್ಚಿಡಿ.
- ಈಗ ಬಾಯಲ್ಲಿ ನೀರೂರಿಸುವ ಕೆಸುವಿನ ಕರ್ಕ್ಲಿ ತಯಾರು !!!
ಇತರೆ ಮಾಹಿತಿ
:
- ಮಾಡಲು ಬೇಕಾಗುವ ಸಮಯ 10 ನಿಮಿಷ.
- ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದು ಸವಿಯಿರಿ.
No comments:
Post a Comment