ರಾಗಿ ತಂಪು / raagi tampu

ಬೇಕಾಗುವ ಪದಾರ್ಥಗಳು :
 • ರಾಗಿ ಕಾಳು – 2 ಕಪ್ (ಕಲ್ಲು ತೆಗೆದು ನೀರಲ್ಲಿ ತೊಳೆದು ಚೊಕ್ಕಮಾಡಿ ಇಟ್ಟುಕೊಳ್ಳಿ)
 • ಬೆಲ್ಲ – 1/2 ಲೋಟ
 • ಯಾಲಕ್ಕಿ ಪುಡಿ – 1 ಚಿಟಿಕೆ

ಮಾಡುವ ವಿಧಾನ :

 • ರಾಗಿಯನ್ನು ಕನಿಷ್ಟ 3 ತಾಸು ನೀರಲ್ಲಿ ನೆನೆಸಿ ಇಡಿ.
 • ನಂತರ ಮಿಕ್ಸರ್ ನಲ್ಲಿ ರಾಗಿಯನ್ನು ಬೀಸಿ – ಜಾಳಿಗೆಯಲ್ಲಿ ಅರಿಸಿ ರಾಗಿ ಹಾಲನ್ನು ತೆಗೆದು ಇಟ್ಟುಕೊಳ್ಳಬೇಕು.
 • ಮತ್ತೆ ರಾಗಿಗೆ ನೀರನ್ನು ಹಾಕಿ 2-3 ಸಲ ರುಬ್ಬಿ ರಾಗಿ ಹಾಲು ತೆಗೆಯಿರಿ. 
 • ನಂತರ ರಾಗಿ ಹಾಲು + ಬೆಲ್ಲ + ಯಾಲಕ್ಕಿ ಪುಡಿ - ಸೇರಿಸಿ ಚೆನ್ನಾಗಿ ಕಲಕಿ.

 ಇತರೆ ಮಾಹಿತಿ :
 • ರಾಗಿ ಹಾಲು ಇದು ದೇಹಕ್ಕೆ ತಂಪು. 
 • ಬೇಸಿಗೆಯಲ್ಲಿ ತಂಪಾದ ರಾಗಿ ಹಾಲು ಮಾಡಲು ರಾಗಿಯನ್ನು ರುಬ್ಬುವಾಗ ತಂಪಾದ ಫ಼್ರಿಡ್ಜ್ ನೀರನ್ನು ಬಳಸಿ.

1 comment:

 1. Naanu idra try maadte. Thank you, it's really very useful especially in summer.

  ReplyDelete