ಹರ್ವೆ ಸೊಪ್ಪಿನ ಪಲ್ಯ


ಹರ್ವೆ ಸೊಪ್ಪಿನ ಬಿಸಿ ಬಿಸಿ ಪಲ್ಯ ಮಧ್ಯಾಹ್ನದ ಊಟವನ್ನು ಕಾವೇರಿಸುತ್ತದೆ.




ಬೇಕಾಗುವ ಪದಾರ್ಥಗಳು:
  • ಒಂದು ಕಟ್ಟು ಹಸಿಯಾದ ಹರ್ವೆ ಸೊಪ್ಪು
  • 2 ಚಮಚ ಅಡುಗೆ ಎಣ್ಣೆ
  • ಸಾಸಿವೆ ಕಾಳು -- ಅರ್ಧ ಚಮಚ
  • ಸ್ವಲ್ಪ ಅರಿಶಿನ
  • ಹಸಿ ಮೆಣಸು - 1
  • ಉಪ್ಪು - 1 ಚಮಚ
  • 1 ಲೋಟ - ತಣ್ಣೀರು.
ತಯಾರಿಸುವ ವಿಧಾನ:
  • ಹರ್ವೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ.
  • ಪಲ್ಯ ಮಾಡಬೇಕೆಂದಿರುವ ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ.
  • ಆ ಪಾತ್ರೆಯಲ್ಲಿ, ಸಾಸಿವೆ (1/2 ಚಮಚ) + ಒಂದು ಚಿಟಿಕೆ ಅರಿಶಿನ + 1 ಜಜ್ಜಿದ ಹಸಿ ಮೆಣಸು + 1 ಚಮಚ ಉಪ್ಪು : ಇವೆಲ್ಲವನ್ನು ಹಾಕಿ ಬಿಸಿ ಮಾಡಿ
  • ಈಗ ಪಾತ್ರೆಗೆ ಹೆಚ್ಚಿದ ಹರ್ವೆ ಸೊಪ್ಪನ್ನು ಹಾಕಿ. ಚುರ್ ಎಂದು ಶಬ್ದ ಬರುವದು. ಅದಕ್ಕೆ ಹೆದರಬೇಡಿ :)
  • ಅಡಿ ಹತ್ತದಿರಲು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ.
  • ಹದವಾದ ಗ್ಯಾಸ್ ಬೆಂಕಿಯ ಉರಿಯಲ್ಲಿ ಪಲ್ಯವನ್ನು ಬೇಯಿಸಿ.
  • ಪಲ್ಯದ ಪಾತ್ರೆಯನ್ನು ಸೊಟಿನಲ್ಲಿ ಆಗಾಗ ಕದಡುತ್ತಿರಿ.
  • 15 ನಿಮಿಷಗಳ ಆಸು ಪಾಸಿನಲ್ಲಿ ನಿಮ್ಮ ಪಲ್ಯ ತಯಾರು.
ಹರ್ವೆ ಸೊಪ್ಪಿನ ಪಲ್ಯದ ಬಗ್ಗೆ ಇತರೆ ಮಾಹಿತಿಗಳು:
  • ಮಾಡಲು ಬೇಕಾಗುವ ಅಂದಾಜು ಸಮಯ -- 15 ನಿಮಿಷಗಳು.
  • ಫ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.
  • ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದಷ್ಟು ಮಜ ಜಾಸ್ತಿ...!!!
  • ತಿನ್ನುವಾಗ ಪಲ್ಯದಲ್ಲಿ ಹಸಿ ಮೆಣಸನ್ನು ಪ್ರತ್ಯೇಕವಾಗಿ ಗುರುತುಹಿಡಿಯುವದು ಬಹುಕಷ್ಟ. ಹುಷಾರ್ಕೆಯಿಂದ ತಿನ್ನಿ :)
ಕೃಪೆ : Raghavendra Hegde Panatageri, Bangalore.

No comments:

Post a Comment