ಶುಂಠಿ ತಂಬಳಿ (Shunti Tambali)

ಹವ್ಯಕರಿಗೆ ಕೆಲವರು ತಂಬಳಿ ಜನ ಎಂದೂ ಕರೆಯುವದುಂಟು...ಹವ್ಯಕರಿಗೂ ವಿಧವಿಧವಾದ ತಂಬಳಿಗಳಿಗೂ ಅಷ್ಟೊಂದು ಅನ್ಯೋನ್ಯತೆ.

ಬೇಕಾಗುವ ಪದಾರ್ಥಗಳು:
 • ಶುಂಠಿ -- 2 ತುಂಡು. (ಚೆನ್ನಾಗಿ ತೊಳೆದಿರಿ)
 • ತೆಂಗಿನಕಾಯಿ ತುರಿ -- 1/2 ಕಪ್
 • ಕಡೆದ ಮಜ್ಜಿಗೆ - 1 ಕಪ್
 • ಉಪ್ಪು - 1 ಚಮಚ
 • ಹಸಿ ಮೆಣಸು - 1
ಒಗ್ಗರಣೆ ಪದಾರ್ಥಗಳು:
 • ಅಡುಗೆ ಎಣ್ಣೆ -- 2 ಚಮಚ
 • ಒಣ ಮೆಣಸು -- 1 (ಮೆಣಸಿನ ಪುಡಿ ಬೇಡ. ರುಚಿ ಕೆಡುತ್ತದೆ.)
 • ಸಾಸಿವೆ ಕಾಳು -- 1/2 ಚಮಚ
 • ಕರಿಬೇವಿನ ಸೊಪ್ಪು -- ಅಂದಾಜು 6 ಎಲೆಗಳು
ತಯಾರಿಸುವ ವಿಧಾನ:1. ಶುಂಠಿ + ತೆಂಗಿನಕಾಯಿ ತುರಿ + 1 ಹಸಿ ಮೆಣಸು + ಸ್ವಲ್ಪ ನೀರು -- ಇವನ್ನು ಮಿಕ್ಸಿಯಲ್ಲಿ ನುಣ್ಣಗೆ ಬೀಸಿ ಇಟ್ಟುಕೊಳ್ಳಿ.
2. ಒಗ್ಗರಣೆ :
 • ಚಮಚ ಅಡುಗೆ ಎಣ್ಣೆಯನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ.
 • ಅದಕ್ಕೆ ಒಣ ಮೆಣಸು + ಸಾಸಿವೆ ಕಾಳು + ಕರಿಬೇವಿನ ಸೊಪ್ಪು -- ಇವನ್ನು ಹಾಕಿ.
 • ಸಾಸಿವೆ ಕಾಳು ಚಿಟಿಪಿಟಿ ಸದ್ದು ಮಾಡಲು ಶುರು ಮಾಡಿದಾಗ ಗ್ಯಾಸ್ ಬಂದು ಮಾಡಿ.
3. ಮೇಲೆ ಹೇಳಿದ ಮಿಶ್ರಣ + ಕಡೆದ ಮಜ್ಜಿಗೆ + ಉಪ್ಪು + ಒಗ್ಗರಣೆ
೪. ಚೆನ್ನಾಗಿ ಕಲಕಿ, ಉಪ್ಪು ಬೇಕಾದರೆ ಹಾಕಿಕೊಳ್ಳಿ.

ತಂಬಳಿಯ ಬಗ್ಗೆ ಇತರೆ ಮಾಹಿತಿಗಳು:
 • ಮಾಡಲು ಬೇಕಾಗುವ ಅಂದಾಜು ಸಮಯ -- 10 ನಿಮಿಷಗಳು.
 • ಫ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.

No comments:

Post a Comment