ಹಾಗಲಕಾಯಿ ಕಾಯಿರಸ


ಹವ್ಯಕರ ಅಡುಗೆಯಲ್ಲಿಯ ವಿಶಿಷ್ಟವಾದ ಇನ್ನೊಂದು ಬಗೆ.

ಬೇಕಾಗುವ ಪದಾರ್ಥಗಳು :
ಕಾಯಿತುರಿ : 1/2 ಕಪ್.
ಬೆಲ್ಲ : 2 ಟೇಬಲ್ ಚಮಚ.
ಹಾಗಲಕಾಯಿ : 2.
ಹುಣಸೇ ಹಣ್ಣು : ಸ್ವಲ್ಪ
ಉಪ್ಪು : ರುಚಿಗೆ ತಕ್ಕಷ್ಟು.
ಒಗ್ಗರಣೆಗೆ :
ಕಡ್ಲೆಬೇಳೆ : 2 ಚಮಚ
ಉದ್ದಿನಬೇಳೆ : 2 ಚಮಚ
ಒಣಮೆಣಸು : 4 ರಿಂದ 6
ಇಂಗು : 1 ಚಿಟಿಕೆ
ಎಳ್ಳು : 1 ಚಮಚ.
ಕರಿಬೇವು : 5 ರಿಂದ 8
ಸಾಸಿವೆ : 1 ಚಮಚ.
ಮಾಡುವ ವಿಧಾನ

  • ಮೊದಲಿಗೆ ಹಾಗಲಕಾಯಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಉಪ್ಪು ಹಾಗೂ ಬೆಲ್ಲ ಹಾಕಿ ಬೇಯಿಸಿಟ್ಟುಕೊಳ್ಳಬೇಕು.
  • ಬಾಣಲಿಯಲ್ಲಿ ಅಡುಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಕಡ್ಲೆಬೇಳೆ ಹಾಕಿ ಹುರಿಯಬೇಕು. ನಂತರ ಉದ್ದಿನಬೇಳೆ ಹಾಕಬೇಕು.
  • ಆಮೇಲೆ ಒಣಮೆಣಸು + ಇಂಗು + ಎಳ್ಳು ಹಾಕಿ ಹುರಿಯಬೇಕು.
  • ಮಿಕ್ಸಿಯಲ್ಲಿ ಕಾಯಿತುರಿ, ಹುಣಸೇ ಹಣ್ಣು ಜೊತೆಗೆ ಒಗ್ಗರಣೆಯನ್ನು ಹಾಕಿ ರುಬ್ಬಿಕೊಳ್ಳಬೇಕು.
  • ಬೇರೆ ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಸಾಸಿವೆ + ಕರಿಬೇವು ಹಾಕಿ ನಂತರ ಬೇಯಿಸಿಟ್ಟುಕೊಂಡ ಹಾಗಲಕಾಯಿ ಸೇರಿಸಬೇಕು.
  • ಕೊನೆಯಲ್ಲಿ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು.

ಕೃಪೆ : Vinuta Hegde Keshinmane, Netherlands.

No comments:

Post a Comment