ಹವ್ಯಕರಿಗೆ ಬೇಸಿಗೆಗಾಲದಲ್ಲಿ ಬೇಕೇಬೇಕಾದ ತಂಬಳಿ ಅಂದರೆ ಅದೇ ಮಾವಿನಕಾಯಿ ತಂಬಳಿ.......................... ......
ಬೇಕಾಗುವ ಪದಾರ್ಥಗಳು :
- ಹುಳಿಮಾವಿನಕಾಯಿ - 1
- ತೆಂಗಿನಕಾಯಿ ತುರಿ - 1/2 ಕಪ್
- ಉದ್ದಿನಬೇಳೆ - 1 ಚಮಚ
- ಎಳ್ಳು - 1 ಚಮಚ
- ಹಸಿಮೆಣಸು - 2
- ಕರಿಬೇವಿನ ಸೊಪ್ಪು - 5 ರಿಂದ 6 ಎಲೆಗಳು
- ಕೊಬ್ಬರಿ ಎಣ್ಣೆ - 2ಚಮಚ
- ಉಪ್ಪು - 2 ಚಮಚ
- ಕಡೆದ ಮಜ್ಜಿಗೆ - 1 ಕಪ್
- ಸಾಸಿವೆ - 1 ಚಮಚ
ಮಾಡುವ ವಿಧಾನ :
- ಮೊದಲಿಗೆ ಮಾವಿನ ಕಾಯಿಯನ್ನು ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೊಳುಗಳಾಗಿ ಮಾಡಬೇಕು.
- ಒಗ್ಗರಣೆಗೆ ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ 1 ಚಮಚ ಉದ್ದಿನಬೇಳೆ, ಹಸಿಮೆಣಸು 2, ಎಳ್ಳು 1 ಚಮಚ ಹಾಕಿ ಹುರಿಯಬೇಕು.
- ಇದನ್ನು ( ಒಗ್ಗರಣೆಯನ್ನು ) ಕಾಯಿತುರಿಯೊಂದಿಗೆ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.
- ರುಬ್ಬಿದ ಮಿಶ್ರಣವನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
- ನಂತರ ಕಡೆದ ಮಜ್ಜಿಗೆಯನ್ನು ಸೇರಿಸಬೇಕು.
- ಕೊನೆಯಲ್ಲಿ ಮತ್ತೆ ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಇಂಗು, ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಸೇರಿಸಬೇಕು.
ಈಗ ಮಾವಿನಕಾಯಿ ತಂಬಳಿ ಅನ್ನದ ಜೊತೆಗೆ ಸವಿಯಲು ರೆಡಿ.
ರುಚಿ ನೋಡಿ.
ಕೃಪೆ : Vinuta Hegde Keshinmane, Netherlands.
No comments:
Post a Comment