ಎಲವರಿಗೆ ಕುಡಿ ತಂಬಳಿ ಹವ್ಯಕರ ತಂಬಳಿಯ ಇನ್ನೊಂದು ಬಗೆ.
ಬೇಕಾಗುವ ಪದಾರ್ಥಗಳು :
- ಎಲವರಿಗೆ ಕುಡಿ - 1 ಹಿಡಿ.
- ಕಾಯಿತುರಿ - 1/2 ಕಪ್
- ಕಡೆದ ಮಜ್ಜಿಗೆ - 1 ಕಪ್
ಒಗ್ಗರಣೆಗೆ :
- ಜೇರಿಗೆ - 1 ಚಮಚ
- ಕಾಳು ಮೆಣಸು (ಬೋಳುಕಾಳು) - 8 ರಿಂದ 10
ಮಾಡುವ ವಿಧಾನ :
- ಮೊದಲು ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ 1 ಚಮಚ ಜೇರಿಗೆಯನ್ನು ಹಾಕಬೇಕು.
- ನಂತರ ಕಾಳುಮೆಣಸು (10) ಹಾಕಬೇಕು.
- ಆಮೇಲೆ ಎಲಾವರಿಗೆ ಕುಡಿ ಹಾಕಿ ಹುರಿಯಬೇಕು.
- ಎಲವರಿಗೆ ಸೊಪ್ಪು ಗರಿಗರಿಯಾದ ನಂತರ ಮಿಕ್ಸಿಯಲ್ಲಿ ಕಾಯಿತುರಿ ಜೊತೆ ನೀರು ಹಾಕಿ ರುಬ್ಬಿಕೊಳ್ಳಬೇಕು.
- ರುಬ್ಬಿಕೊಂಡ ಮಿಶ್ರಣವನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ 1 ಕಪ್ ಮಜ್ಜಿಗೆ ಸೇರಿಸಬೇಕು.
- ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
- ಕೊನೆಯಲ್ಲಿ ಸಾಸಿವೆ ಒಗ್ಗರಣೆಯನ್ನು ಹಾಕಿದರೆ ತಂಬಳಿ ರೆಡಿ
- ಮಾಡಲು ಬೇಕಾಗುವ ಸಮಯ 10 ನಿಮಿಷ.
- ಮಜ್ಜಿಗೆ ಸೇರಿಸದೇ ಇದ್ದರೆ 1 ದಿನ ಇಡಬಹುದು.
- ಬೇಸಿಗೆಯಲ್ಲಿ ಈ ತಂಬಳಿ ದೇಹಕ್ಕೆ ತಂಪು ನೀಡುತ್ತದೆ.
- ಅನ್ನದ ಜೊತೆ ಕಲಸಿ ಉಟಮಾಡಬಹುದು.
- ಉಟದ ಜೊತೆ / ನಂತರ ಪಾನೀಯದ ಹಾಗೆ ಕುಡಿಯಬಹುದು.
- ಈ ತಂಬಳಿಯ ಇನ್ನೊಂದು ಹೆಸರು ಹಸಿರು ತಂಬಳಿ.
ollle mahiti... chitragala sameta.. baraha iddare innu olledu...anta anisitu...
ReplyDelete@amita: ಧನ್ಯವಾದ... ಚಿತ್ರಗಳು ಬಹು ಬೇಗನೇ ಸೇರಲಿವೆ... ನಿರೀಕ್ಷಿಸಿ :)
ReplyDelete