ಬೆಂಡೇಕಾಯಿ ಪಲ್ಯ

ಬೇಕಾಗುವ ಪದಾರ್ಥಗಳು:
  • ಬೆಂಡೇಕಾಯಿ - 10-15
  • 2 ಚಮಚ ಅಡುಗೆ ಎಣ್ಣೆ
  • ಹಸಿ ಮೆಣಸು - 1
  • ಸ್ವಲ್ಪ ಅರಿಶಿನ
  • 1 ಲೋಟ - ತಣ್ಣೀರು.
  • ಒಣ ಮೆಣಸಿನ ಪುಡಿ
ತಯಾರಿಸುವ ವಿಧಾನ:
  • ಬೆಂಡೇಕಾಯಿಯನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಿ.
  • ಪಲ್ಯ ಮಾಡಬೇಕೆಂದಿರುವ ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ.
  • ಆ ಪಾತ್ರೆಯಲ್ಲಿ, ಒಂದು ಚಿಟಿಕೆ ಅರಿಶಿನ + 1 ಜಜ್ಜಿದ ಹಸಿ ಮೆಣಸು + 1 ಚಮಚ ಉಪ್ಪು + ಸ್ವಲ್ಪ ಒಣಮೆಣಸು ಪುಡಿ : ಇವೆಲ್ಲವನ್ನು ಹಾಕಿ ಬಿಸಿ ಮಾಡಿ
  • ಈಗ ಪಾತ್ರೆಗೆ ಹೆಚ್ಚಿದ ಬೆಂಡೇಕಾಯಿಯನ್ನು ಹಾಕಿ.
  • ಅಡಿ ಹತ್ತದಿರಲು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ. ಚೆನ್ನಾಗಿ ಕದಕಿ.
  • ಹದವಾದ ಗ್ಯಾಸ್ ಬೆಂಕಿಯ ಉರಿಯಲ್ಲಿ ಪಲ್ಯವನ್ನು ಬೇಯಿಸಿ.
  • 15 ನಿಮಿಷಗಳ ಆಸು ಪಾಸಿನಲ್ಲಿ ನಿಮ್ಮ ಪಲ್ಯ ತಯಾರು.
ಬೆಂಡೇಕಾಯಿ ಪಲ್ಯದ ಬಗ್ಗೆ ಇತರೆ ಮಾಹಿತಿಗಳು:
  • ಮಾಡಲು ಬೇಕಾಗುವ ಅಂದಾಜು ಸಮಯ -- 15 ನಿಮಿಷಗಳು.
  • ಫ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.
ಕೃಪೆ : Raghavendra Hegde Panatageri, Bangalore.

No comments:

Post a Comment