ಹವ್ಯಕರ ಮನೆಗೆ ಅತಿಥಿಗಳು ಬ೦ದಾಗ ಪಟ್ ಅಂತ ಆಗುವ ಸಿಹಿ ಅಂದರೆ ಶಿರಾ.
ಮಾಡಿ ರುಚಿ ನೋಡಿ...................
ಬೇಕಾಗುವ ಪದಾರ್ಥಗಳು :
- ಗೋಧಿ ಹಿಟ್ಟು : 1 ಕಪ್
- ಸಕ್ಕರೆ : 2 ಕಪ್
- ಹಾಲು : 1/2 ಕಪ್
- ನೀರು : 1/2 ಕಪ್
- ಯಾಲಕ್ಕಿ ಪುಡಿ : 1 ಚಮಚ.
- ದ್ರಾಕ್ಷಿ, ಗೋಡಂಬಿ : ಸ್ವಲ್ಪ
- ತುಪ್ಪ : 1 ಕಪ್.
ಮಾಡುವ ವಿಧಾನ :
- 1 ಪಾತ್ರೆಯಲ್ಲಿ ಹಾಲು + ನೀರು ಸೇರಿಸಿ ಬಿಸಿಮಾಡಿಕೊಳ್ಳಬೇಕು.
- ಇನ್ನೊ೦ದು ಬಾಣಲಿಯಲ್ಲಿ 1 ಕಪ್ ತುಪ್ಪ ಹಾಕಿ, ಅದು ಬಿಸಿಯಾದ ನಂತರ 1 ಕಪ್ ಗೋಧಿ ಹಿಟ್ಟು ಹಾಕಿ ಹುರಿಯಬೇಕು.
- ಗೋಧಿ ಹಿಟ್ಟು ಕೆಂಪಗೆ ಆಗುವವರೆಗೆ ಸಣ್ಣ ಉರಿಯಲ್ಲಿ ಹುರಿಯಬೇಕು.
- ನಂತರ ಬಿಸಿಯಾದ ಹಾಲನ್ನು ಗೋಧಿ ಹಿಟ್ಟಿಗೆ ಹಾಕಿ ಬಾಣಲಿಗೆ ಮುಚ್ಚಳವನ್ನು ಮುಚ್ಚಬೇಕು.
- 2 ನಿಮಿಷ ಬೇಯಲು ಬಿಟ್ಟು ನಂತರ ಅದಕ್ಕೆ 2 ಕಪ್ ಸಕ್ಕರೆ ಹಾಕಿ ಕೈ ಆಡಿಸುತ್ತಿರಬೇಕು.
- ಮಿಶ್ರಣ ಗಟ್ಟಿ ಆಗುತ್ತಾ ಬಂದ ಹಾಗೆ ಅದಕ್ಕೆ ದ್ರಾಕ್ಷಿ + ಗೋಡಂಬಿ+ಯಾಲಕ್ಕಿ ಪುಡಿ ಸೇರಿಸಬೇಕು....
- ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಉರಿಯನ್ನು ಆರಿಸಿ 5 ನಿಮಿಷ ಬಿಡಬೇಕು.
- ಈಗ ಬಿಸಿಬಿಸಿ ಶಿರಾ ರುಚಿ ನೋಡಲು ರೆಡಿ. ·
ಇತರೆ ಮಾಹಿತಿಗಳು :
- ಮಾಡಲು ಬೇಕಾಗುವ ಸಮಯ 10 ನಿಮಿಷ........
- 2 ದಿನ ಇಟ್ಟೂ ತಿನ್ನಬಹುದು.....
- ಅವಲಕ್ಕಿಯ ಜೊತೆಗೆ ತಿಂದರೆ ಇನ್ನೂ ಮಜಾ.
No comments:
Post a Comment