ಹೀರೇಕಾಯಿ ಪಾಯಸ (Heerekayi Payasa)

ಬೇಕಾಗುವ ಪದಾರ್ಥಗಳು : 
 • ಹೀರೇಕಾಯಿ - 2 (ಸಿಪ್ಪೆ ಕೆತ್ತಿ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ.) 
 • ರವೆ : 4 ಚಮಚ ರವೆಯನ್ನುತುಪ್ಪದಲ್ಲಿ ಹುರಿದು ಇಟ್ಟುಕೊಳ್ಳಿ.
 • ಬೆಲ್ಲ ಅಥವಾ ಸಕ್ಕರೆ : 1 ಕಪ್
 • ಹಾಲು : 2 ಕಪ್ 
 • ಯಾಲಕ್ಕಿ ಪುಡಿ : ಸ್ವಲ್ಪ ಪುಡಿ ಮಾಡಿಕೊಳ್ಳಿ.
 • ದ್ರಾಕ್ಷಿ, ಗೋಡಂಬಿ : ಸ್ವಲ್ಪ   
ಮಾಡುವ ವಿಧಾನ :
 • 1 ಪಾತ್ರೆಯಲ್ಲಿ 2 ಕಪ್ ಹಾಲು + ಸ್ವಲ್ಪ ನೀರು ಸೇರಿಸಿ ಬಿಸಿಮಾಡಿಕೊಳ್ಳಬೇಕು. 
 • ಆ ಪಾತ್ರೆಯಲ್ಲಿ ಹೀರೇಕಾಯಿಯ ಕತ್ತರಿಸಿದ ಹೋಳುಗಳನ್ನು ಹಾಕಿ, ಕುದಿಸಿ. 
 • ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ.
 • ಪಾಯಸ ಕುದಿಯುತ್ತಿರುವಾಗ ಮಿಶ್ರಣವನ್ನು ಚೆನ್ನಾಗಿ ಕಲಕುತ್ತಿರಿ.
 • 5 ನಿಮಿಷಗಳ ನಂತರ 4 ಚಮಚ ರವೆಯನ್ನು ಸೇರಿಸಿ.(ರವೆಯನ್ನು ಸೇರಿಸವದರಿಂದ ಪಾಯಸ ಗಟ್ಟಿ ಆಗುತ್ತದೆ) 
 • ದ್ರಾಕ್ಷಿ, ಗೋಡಂಬಿ,ಯಾಲಕ್ಕಿ ಪುಡಿ ಇವನ್ನೂ ಹಾಕಿ.
 • ಪಾಯಸದ ಮಿಶ್ರಣ ಗಟ್ಟಿ ಆದಂತೆ, ರುಚಿ ನೋಡಿ .... ಹೀರೇಕಾಯಿ ಪಾಯಸ ತಯಾರು...  
 ಇತರೆ ಮಾಹಿತಿಗಳು :  
 • ಮಾಡಲು ಬೇಕಾಗುವ ಸಮಯ 20 ನಿಮಿಷ........
 • 1 ದಿನ ಇಟ್ಟೂ ತಿನ್ನಬಹುದು..... 
   Prepared by Satish MR & Experimented on Dinesh Hegde,Mattihalli Successfully :)

1 comment:

 1. ಚೆನ್ನಾಗಿದ್ದೋ.. ಬಾಯಲ್ಲಿ ನೀರು ಬಂತು :-)

  ReplyDelete