Showing posts with label ಪಾನೀಯ. Show all posts
Showing posts with label ಪಾನೀಯ. Show all posts

ಕುಡಿಯುವ ಮಜ್ಜಿಗೆ ತಂಬಳಿ

ಬೇಕಾಗುವ ಪದಾರ್ಥಗಳು :
  • ಚೆನ್ನಾಗಿ ಕಡೆದ ಮಜ್ಜಿಗೆ - 5 ಲೋಟ.
  • ಕೊತ್ತುಂಬರಿ ಸೊಪ್ಪು -- ಸ್ವಲ್ಪ
  • ಲಿಂಬು -- 1
  • ಉಪ್ಪು -- 1 ಚಿಟಿಕೆ
  • ಹಸಿಮೆಣಸು -1
  • ಶುಂಠಿ - ಸ್ವಲ್ಪ
ಮಾಡುವ ವಿಧಾನ :
  • ಕಡೆದ ಮಜ್ಜಿಗೆಗೆ ನೀರು ಹಾಕಿ + ಉಪ್ಪು + ನಿಂಬೆ ಹಣ್ಣಿನ ರಸ ಹಾಕಿ -- ಹದ ಮಾಡಿ ಇಟ್ಟುಕೊಳ್ಳಿ.
  • ಹಸಿ ಮೆಣಸು + ಕೊತ್ತುಂಬರಿ ಸೊಪ್ಪು ಇವನ್ನು --> ಮಿಕ್ಸರ್ ನಲ್ಲಿ ಬೀಸಿ
  • ಈಗ ಮಜ್ಜಿಗೆಗೆ ಮಿಕ್ಸರ್ ನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಕಿ.

ರಾಗಿ ತಂಪು / raagi tampu

ಬೇಕಾಗುವ ಪದಾರ್ಥಗಳು :
  • ರಾಗಿ ಕಾಳು – 2 ಕಪ್ (ಕಲ್ಲು ತೆಗೆದು ನೀರಲ್ಲಿ ತೊಳೆದು ಚೊಕ್ಕಮಾಡಿ ಇಟ್ಟುಕೊಳ್ಳಿ)
  • ಬೆಲ್ಲ – 1/2 ಲೋಟ
  • ಯಾಲಕ್ಕಿ ಪುಡಿ – 1 ಚಿಟಿಕೆ

ಮಾಡುವ ವಿಧಾನ :

  • ರಾಗಿಯನ್ನು ಕನಿಷ್ಟ 3 ತಾಸು ನೀರಲ್ಲಿ ನೆನೆಸಿ ಇಡಿ.
  • ನಂತರ ಮಿಕ್ಸರ್ ನಲ್ಲಿ ರಾಗಿಯನ್ನು ಬೀಸಿ – ಜಾಳಿಗೆಯಲ್ಲಿ ಅರಿಸಿ ರಾಗಿ ಹಾಲನ್ನು ತೆಗೆದು ಇಟ್ಟುಕೊಳ್ಳಬೇಕು.
  • ಮತ್ತೆ ರಾಗಿಗೆ ನೀರನ್ನು ಹಾಕಿ 2-3 ಸಲ ರುಬ್ಬಿ ರಾಗಿ ಹಾಲು ತೆಗೆಯಿರಿ. 
  • ನಂತರ ರಾಗಿ ಹಾಲು + ಬೆಲ್ಲ + ಯಾಲಕ್ಕಿ ಪುಡಿ - ಸೇರಿಸಿ ಚೆನ್ನಾಗಿ ಕಲಕಿ.

 ಇತರೆ ಮಾಹಿತಿ :
  • ರಾಗಿ ಹಾಲು ಇದು ದೇಹಕ್ಕೆ ತಂಪು. 
  • ಬೇಸಿಗೆಯಲ್ಲಿ ತಂಪಾದ ರಾಗಿ ಹಾಲು ಮಾಡಲು ರಾಗಿಯನ್ನು ರುಬ್ಬುವಾಗ ತಂಪಾದ ಫ಼್ರಿಡ್ಜ್ ನೀರನ್ನು ಬಳಸಿ.