ಈ ಹವ್ಯಕ ಪಾಕ ಬ್ಲಾಗ್ ಕುರಿತು

ಬೆಳ್ಗಾಮಂಚಿ ತೆಳ್ಳವ್ ದೋಸೆ - ಬೆಲ್ಲಾತುಪ್ಪಾ ತಿಂದು,
ಮದ್ಯಾನ್ನಕ್ಕೆ ಅಪ್ಪೇಹುಳಿ ಗಂಟ್ಲಮಟಾ ಕುಡ್ದು,
ಹೇಡ್ಗೆ ಕಟ್ಟೆ ಮೇಲೆ ಕುಂತು ಹತ್ತು ಕವ್ಳಾ ಜಡ್ದು,
ರಾತ್ರೆಪ್ಪಾಗ ಹಲ್ಸಿನಣ್ಣಿನ ಕಡಬು - ಜೇನ್ತುಪ್ಪಾ ಮೆದ್ರೆ,
ಸ್ವರ್ಗಕ್ಕೆ ಮೂರೇ ಗೇಣೆಂದ ಸರ್ವಜ್ನ....!!!


ಕೆಲ ದಿನಗಳ ಹಿಂದೆ ಹವ್ಯಕರ ಅಡುಗೆ ಪದ್ಧತಿಯ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದೆ. ಸರಿಯಾದ ಮಾಹಿತಿಯುಕ್ತವಾದ ತಾಣ ಸಿಗದೇಹೋದಕಾರಣ ಈ ಬ್ಲಾಗ್ ಶುರುವು ಮಾಡಬೇಕಾದ ಪ್ರಸಂಗ ಬಂತು.

ಹವ್ಯಕ ಪಾಕ ಬ್ಲಾಗ್ ನ  ಉದ್ದೇಶ:
  • Universal: ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಹವ್ಯಕರ ದಿನನಿತ್ಯದ ಅಡುಗೆ ಪದಾರ್ಥಗಳನ್ನು ತಯಾರಿಸುವ ವಿಧಾನವನ್ನು ವಿವರಿಸುವದು. (ಉದಾ: ಅಪ್ಪೇಹುಳಿ, ಮಜ್ಗೆ ಪೊಳ್ಜ್ಯ , ತೆಳ್ಳವ್ವು ದೋಸೆ ಇತ್ಯಾದಿ).  ಸಾಮಾನ್ಯವಾಗಿ ಅಪರೂಪಕ್ಕೆ ಅಡುಗೆ ಮಾಡುವವರಿಗೆ ಯಾವ ಪದಾರ್ಥಕ್ಕೆ ಎನೇನು ಹಾಕಬೇಕು ಎನ್ನುವ ವಿವರಗಳು ಕೆಲದಿನಗಳ ಒಳಗೆ ನೆನಪಿನಿಂದ ಮಾಯವಾಗಿಬಿಡುತ್ತದೆ... ಉಪ್ಪು ಹಾಕಿ ತರಕಾರಿ ಬೇಯಿಸಬೇಕೋ ಅಥವಾ ತರಕಾರಿ ಬೇಯಿಸಿ ಉಪ್ಪು ಹಾಕಬೇಕೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಗಳು ನಿಗೂಢವಾಗಿಯೇ ಉಳಿದುಬಿಡುತ್ತದೆ. !!!  ಆದ್ದರಿಂದ ಯಾವಾಗ ಎಲ್ಲಿ ಬೇಕಾದರೂ ಉತ್ತರ ಸಿಗಬಹುದಾದಂಥಹ ಅಂತರ್ಜಾಲ ತಾಣ ಅತ್ಯಗತ್ಯ. 
  • Open Source: ಯಾವ ಓದುಗರು ಬೇಕಾದರೂ ತಮಗೆ ಗೊತ್ತಿರುವ ಹವ್ಯಕ ಶೈಲಿಯ ಅಡುಗೆ ತಯಾರಿಸುವ ವಿಧಾನವನ್ನು ಹಂಚಿಕೊಳ್ಳಬಹುದು. (ಒಮ್ಮೆಯಾದರೂ ಆ ಅಡುಗೆಯನ್ನು ಅವರು ತಮ್ಮ ಕೈಯಾರೆ ತಯಾರಿಸಿರಬೇಕು :)). ದೇಶ ಭಾಷೆಗಳ ಗಡಿಯಿಲ್ಲ.
  • Distributed Ownership: ಈ ಬ್ಲಾಗ್ ಯಾರೋ ಒಬ್ಬರಿಗೆ ಸೇರಿದ್ದಲ್ಲ. ಇದರಿಂದ ಯಾರೂ ಹೆಸರು / ದುಡ್ಡು ಮಾಡುತ್ತಿಲ್ಲ :) ಒಬ್ಬನಿಂದಲೇ ಎಲ್ಲ ಅಡುಗೆಗಳನ್ನು ಕಲೆಹಾಕುವದು ಸಾಧ್ಯವಿಲ್ಲ. ಈ ಬ್ಲಾಗ್ ಗೆ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.(ಅಡುಗೆ ಬರೆದು ಕಳುಹಿಸುವದು, ಪೊಟೋ ಕಳುಹಿಸುವದು ಇತ್ಯಾದಿ). ಈ ಬ್ಲಾಗ್ ಎಲ್ಲ ಅಡುಗಾಚಂದಾದಾರರುಗಳಿಗೆ ಸೇರಿದ್ದು.!!! 
  • Need: ಅಡುಗೆ ಸಂಸ್ಕೃತಿಯ ಅವಿಭಾಜ್ಯ ಅಂಗ. ಆಧುನಿಕತೆಯ ಓಟದಲ್ಲಿ ಆ ಕೊಂಡಿ ತಪ್ಪದಿರಲಿ ಎಂಬುದೇ ನಮ್ಮೆಲ್ಲರ ಆಶಯ.
ಒಂದು ಪ್ರಶ್ನೆ: ಯಾಕೆ ಕೇವಲ ಹವ್ಯಕರ ಅಡುಗೆ?
ಉತ್ತರ : ಇಲ್ಲಿನ ಬರಹಗಳ ಗುರಿ ಹವ್ಯಕ ಸಂಪ್ರದಾಯದಲ್ಲಿರುವ ಅಡುಗೆಯ ವಿವರಗಳನ್ನು ಎಲ್ಲರಿಗೆ ಬಿತ್ತರಿಸುವದು ಅಷ್ಟೇ.

ಕೊನೆಯ ಪ್ರಶ್ನೆ: ಈ ಬ್ಲಾಗ್ ಬರೆಯುತ್ತಿರುವನಿಗೆ ಅಡುಗೆ ಮಾಡಲು ಬರುತ್ತದೆಯೇ?
ಉತ್ತರ : ಇಲ್ಲ :) :) :)

ಇಲ್ಲಿ ಆಸಕ್ತ ಓದುಗರು ತಮಗೆ ಗೊತ್ತಿರುವ ಹವ್ಯಕ ಶೈಲಿಯ ಅಡುಗೆಯ ತಯಾರಿಸುವ ವಿಧಾನವನ್ನು ಹಂಚಿಕೊಳ್ಳಬಹುದು.

ನಿಮಗೆ ಗೊತ್ತಿರುವ ಹವ್ಯಕ ಶೈಲಿಯ ಅಡುಗೆಯ ತಯಾರಿಸುವ ವಿಧಾನವನ್ನು ಹಂಚಿಕೊಳ್ಳಬೇಕೆಂದಿದ್ದರೆ  havyakapaaka@gmail.com  ಕ್ಕೆ ಈಮೇಲ್ ಕಳುಹಿಸಿ.