Showing posts with label ಅನ್ನದ ಜೊತೆ. Show all posts
Showing posts with label ಅನ್ನದ ಜೊತೆ. Show all posts

ಬದನೆಕಾಯಿ ಬಜ್ಜಿ (ಹಶಿ) / badnekayi hashi


ಬೇಕಾಗುವ ಪದಾರ್ಥಗಳು : 
  • ಚೆನ್ನಾಗಿ ತೊಳೆದ ಬದನೇಕಾಯಿ : 1 
  • ತೆಂಗಿನ ತುರಿ : ½ ಕಪ್
  • ಗಟ್ಟಿ ಮೊಸರು : ½ ಕಪ್
  • ಉಪ್ಪು : ರುಚಿಗೆ ತಕ್ಕಷ್ಟು 
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
  • ಉದ್ದಿನ ಬೇಳೆ : 1/2 ಚಮಚ
  • ಹಸಿಮೆಣಸಿನ ಕಾಯಿ : 2
  • ಒಣಮೆಣಸಿನ ಕಾಯಿ : 2
  • ಎಳ್ಳು: 1/2 ಚಮಚ
  • ಕೊಬ್ಬರಿ ಎಣ್ಣೆ : 2 ಚಮಚ
  • ಈರುಳ್ಳಿ : 1/2
  • ಸಾಸಿವೆ ಕಾಳು: 1/2 ಚಮಚ
  • ಕರಿಬೇವಿನ ಎಸಳು: 6
 ಮಾಡುವ ವಿಧಾನ : 
  • ಬದನೆಕಾಯಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಸವರಿಕೊಂಡು, ಒಲೆಯ ಉರಿಯಲ್ಲಿ ಸಿಪ್ಪೆ ಕಪ್ಪಾಗುವಷ್ಟು ಸುಡಬೇಕು.  
  • ಸುಟ್ಟ ಬದನೆಕಾಯಿ ತಣ್ಣಗಾದನಂತರ, ಸಿಪ್ಪೆಯನ್ನು ತೆಗೆದು ಚೆನ್ನಾಗಿ ಜಜ್ಜಿ.  
  • ಒಗ್ಗರಣೆ: ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ.
  • ಈಗ ಮೇಲೆ ಹೇಳಿದ ಜಜ್ಜಿದ ಬದನೆಕಾಯಿಗೆ ಒಗ್ಗರಣೆಯನ್ನು ಸೇರಿಸಿ + ನುಣ್ಣಗೆ ರುಬ್ಬಿದ ತೆಂಗಿನ ತುರಿ + ½ ಕಪ್ ಮೊಸರು + ಉಪ್ಪು ಇವನ್ನು ಚೆನ್ನಾಗಿ ಕಲಸಿ.
  • ಈಗ ಬಾಯಲ್ಲಿ ನೀರೂರಿಸುವ ಬದನೆಕಾಯಿ ಬಜ್ಜಿ (ಹಶಿ) ತಯಾರು !!!
ಇತರೆ ಮಾಹಿತಿ : 
  • ಮಾಡಲು ಬೇಕಾಗುವ ಸಮಯ 15 ನಿಮಿಷ. 
  • ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದು ಸವಿಯಿರಿ.        
ಕೃಪೆ: ಶ್ವೇತಾ ಶಶಿಕಾಂತ್ ಹೆಗಡೆ, ಬೆಂಗಳೂರು.

ಹಲಸಿನಕಾಯಿ ಚಕ್ಕೆ ಪೊಳ್ದ್ಯ


ಬೇಕಾಗುವ ಪದಾರ್ಥಗಳು :
  • ಹಲಸಿನಕಾಯಿ ತೊಳೆ ಬೀಜದ ಜೊತೆಗೆ : 20 ರಿಂದ 30
  • ಲಿಂಬು (ದೊಡ್ಡದು) : 1
  • ನೀರು : 1/2 ಲಿಟರ್ 
  • ಕರಿಬೇವು : 10 ಎಲೆಗಳು 
  • ಉಪ್ಪು : ರುಚಿಗೆ ತಕ್ಕಷ್ಟು
  • ಹಸಿ ಮೆಣಸು ( ಸಣ್ಣ ಮೆಣಸು ) : 5 ರಿಂದ 8 
 ಒಗ್ಗರಣೆಗೆ :
  • ಕೊಬ್ಬರಿ ಎಣ್ಣೆ : 4 ಚಮಚ. 
  • ಇಂಗು : 2 ಚಿಟಿಕೆ 
  • ಜೀರಿಗೆ : 1 ಚಮಚ 
  • ಸಾಸಿವೆ : 1 ಚಮಚ
ಮಾಡುವ ವಿಧಾನ :
  • ಮೊದಲಿಗೆ ಹಲಸಿನಕಾಯಿಯನ್ನು ತೊಳೆಯನ್ನು ಚಿಕ್ಕದಾಗಿ ಕತ್ತರಿಸಬೇಕು.
  • ಹಲಸಿನ ಬೀಜವನ್ನು ಸ್ಪಲ್ಪ ಜಜ್ಜಿಕೊಳ್ಳಬೇಕು.
  • ನಂತರ ಇವೆರಡನ್ನು ಪಾತ್ರೆಯಲ್ಲಿ ಹಾಕಿ, ಇವು ಮುಳುಗುವವರೆಗೆ ನೀರು, ರುಚಿಗೆ ತಕ್ಕಷ್ಟು ಉಪ್ಪು, ಲಿಂಬು ಮತ್ತು ಕರಿಬೇವು ಹಾಕಿ ಬೇಯಿಸಿಕೊಳ್ಳಬೇಕು.
  • ಬೇಯಿಸಿಕೊಂಡ ಮಿಶ್ರಣ ತುಂಬಾ ನೀರು ನೀರಾಗಿದ್ದರೆ, ಸ್ವಲ್ಪ ಬೇಯಿಸಿಕೊಂಡ ತೊಳೆಯನ್ನು ಮಿಕ್ಸರಿನಲ್ಲಿ ಹಾಕಿ ರುಬ್ಬಿಕೊಂಡು ಮಿಶ್ರಣಕ್ಕೆ ಸೇರಿಸಬೇಕು.
  • ಒಗ್ಗರಣೆ ಸೌಟಿನಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ನಂತರ ಇಂಗು + ಜೀರಿಗೆ + ರುಬ್ಬಿಕೊಂಡ ಹಸಿಮೆಣಸು + ಸಾಸಿವೆಯ ಒಗ್ಗರಣೆಯನ್ನು ಬೇಯಿಸಿಟ್ಟುಕೊಂಡ ಮಿಶ್ರಣಕ್ಕೆ ಹಾಕಬೇಕು.
  • ಒಗ್ಗರಣೆಯನ್ನು ಹಾಕಿದ ಮೇಲೆ 5 ನಿಮಿಷ ಕುದಿಸಬೇಕು.
ಇತರೆ ಮಾಹಿತಿ:
  • ಮಾಡಲು ಬೇಕಾಗುವ ಸಮಯ 20 ನಿಮಿಷ.
  • ಹಲಸಿನಕಾಯಿ ಸೀಜನ್ ನಲ್ಲಿ ಹವ್ಯಕರ ಮನೆಯ ಖಾಯಂ ಪದಾರ್ಥಗಳಲ್ಲೊ೦ದು.
  • ಇದನ್ನು ಪ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.
  • ಅನ್ನದ ಜೊತೆಗೆ ಕಲಸಿ ಊಟ ಮಾಡಿ ರುಚಿ ನೊಡಿ.
Vinuta. Hegde Keshinmane, Netherlands.

ಮಜ್ಜಿಗೆ ಪೋಳ್ಜ್ಯ

ಮಜ್ಜಿಗೆ ಪೋಳ್ಜ್ಯ ಹವ್ಯಕರ ಅತಿಮೆಚ್ಚಿನ ಅಡುಗೆ ಪದಾರ್ಥಗಳಲ್ಲೊಂದು.

ಬೇಕಾಗುವ ಪದಾರ್ಥಗಳು :
  • ಕೊಬ್ಬರಿ ಎಣ್ಣೆ - 2ಚಮಚ
  • ಸಾಸಿವೆ ಕಾಳು - 1/2 ಚಮಚ
  • ಎಳ್ಳು - 1/2 ಚಮಚ
  • ಜಜ್ಜಿದ ಬೆಳ್ಳುಳ್ಳಿ ಎಸಳು - 2
  • ಹಸಿ ಮೆಣಸು - 1
  • ಕಡೆದ ಮಜ್ಜಿಗೆ - 1 ಕಪ್
  • ನೀರು - 1/2 ಲೋಟ
  • ಸಕ್ಕರೆ - 1 ಚಮಚ
  • ಉಪ್ಪು - 1 ಚಮಚ
ಒಗ್ಗರಣೆಗೆ :
  • 2 ಚಮಚ ಅಡುಗೆ ಎಣ್ಣೆಯನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ.
  • ಅದಕ್ಕೆ -- ಉದ್ದಿನಬೇಳೆ + ಸಾಸಿವೆಕಾಳು + ಎಳ್ಳು + ಹಸಿಮೆಣಸು + 1 ಜಜ್ಜಿದ ಬೆಳ್ಳುಳ್ಳಿ -- ಹಾಕಿ
ಮಾಡುವ ವಿಧಾನ :
  • ಒಗ್ಗರಣೆಯ ಪಾತ್ರೆಗೆ 1\2 ಲೋಟ ನೀರು ಹಾಕಿ ಕುದಿಸಿ.
  • ನಂತರ ಉಪ್ಪು & ಸಕ್ಕರೆ ಹಾಕಿ.
  • ಈ ಪಾತ್ರೆಗೆ ಈಗ ಕಡೆದ ಮಜ್ಜಿಗೆ ಹಾಕಿ.
  • ಮಜ್ಜಿಗೆ ಪೋಳ್ಜ್ಯ ತಯಾರು.

ಮಜ್ಜಿಗೆ ಪೋಳ್ಜ್ಯದ ಬಗ್ಗೆ ಇತರೆ ಮಾಹಿತಿ :
ಮಾಡಲು ಬೇಕಾಗುವ ಸಮಯ 15 ನಿಮಿಷ.ಕೃಪೆ : NG Hegde Keshinmane, Bairumbhe, Sirsi

ಬೆಳ್ಳುಳ್ಳಿ ಬಜ್ಜಿ / Bellulli bajji

ಬೇಕಾಗುವ ಪದಾರ್ಥಗಳು :
  • ಜಜ್ಜಿದ ಬೆಳ್ಳುಳ್ಳಿ ಎಸಳು - 6
  • ಗಟ್ಟಿ ಮೊಸರು - 1 ಕಪ್
  • ಉದ್ದಿನಬೇಳೆ - 1 ಚಮಚ
  • ಒಣ ಮೆಣಸು - 1
  • ಸಾಸಿವೆ ಕಾಳು - 1/2 ಚಮಚ
  • ಉಪ್ಪು - 1/2 ಚಮಚ
  • ಕೊಬ್ಬರಿ ಎಣ್ಣೆ - 2ಚಮಚ

ಒಗ್ಗರಣೆಗೆ :
  • 2 ಚಮಚ ಕೊಬ್ಬರಿ ಎಣ್ಣೆಯನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ.
  • ಅದಕ್ಕೆ ಉದ್ದಿನಬೇಳೆ + 1 ಒಣ ಮೆಣಸು + ಸಾಸಿವೆ + ಜಜ್ಜಿದ ಬೆಳ್ಳುಳ್ಳಿ -- ಇವನ್ನು ಹಾಕಿ.
  • ಸಾಸಿವೆ ಕಾಳು ಚಿಟಿಪಿಟಿ ಸದ್ದು ಮಾಡಲು ಶುರು ಮಾಡಿದಾಗ ಗ್ಯಾಸ್ ಬಂದು ಮಾಡಿ.
ಮಾಡುವ ವಿಧಾನ :
  • ಬಿಸಿಯಾದ ಒಗ್ಗರಣೆಯನ್ನು ಮೊಸರಿನ ಪಾತ್ರೆಗೆ ಹಾಕಿಬಿಡಿ.
  • ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ
  • ಈಗ ಬೆಳ್ಳುಳ್ಳಿ ಬಜ್ಜಿ ತಯಾರು !!!
ಬೆಳ್ಳುಳ್ಳಿ ಬಜ್ಜಿಯ ಬಗ್ಗೆ ಇತರೆ ಮಾಹಿತಿ :
  • ಮಾಡಲು ಬೇಕಾಗುವ ಸಮಯ 5 ನಿಮಿಷ.
  • ಅನ್ನದ ಜೊತೆ ಗಟ್ಟಿಯಾಗಿ ಕಲಸಿ ಊಟಮಾಡಿದರೆ ರುಚಿ ಜಾಸ್ತಿ.

ಕೃಪೆ : NG Hegde Keshinmane, Bairumbhe, Sirsi

ತೊವೆ (Tove)

ಚಳಿಗಾಲದ ಊಟದಲ್ಲಿ ಬಿಸಿಬಿಸಿ ತೊವೆ ಊಟದ ಜೊತೆಗಿದ್ದರೆ ಅದರ ಮಜವೇ ಬೇರೆ !!!!

ಬೇಕಾಗುವ ಪದಾರ್ಥಗಳು:

  • ಹೆಸರು ಬೇಳೆ / ತೊಗರಿ ಬೇಳೆ (ಅಥವಾ ಇವೆರಡೂ 2:1 ಪ್ರಮಾಣದಲ್ಲಿ) -- 1/2 ಲೋಟ.
  • ನಿಂಬು - 1/2
  • ಅರಿಶಿನ - 1 ಚಮಚ

ಒಗ್ಗರಣೆ ಪದಾರ್ಥಗಳು:
  • ಉದ್ದಿನಬೇಳೆ -- 1 ಚಮಚ
  • ಸಾಸಿವೆ ಕಾಳು -- 1/2 ಚಮಚ
  • ಜೀರಿಗೆ - 2 ಚಮಚ
  • ಒಣ ಮೆಣಸು -- 1 (ಇಲ್ಲವಾದರೆ 1/2 ಚಮಚ ಮೆಣಸಿನ ಪುಡಿ)
  • ಹಸಿ ಮೆಣಸು - 1
  • ಜಜ್ಜಿದ ಬೆಳ್ಳುಳ್ಳಿ ಎಸಳು -- 2 (ಇಂಗು ಸ್ವಲ್ಪ ಹಾಕಬಹುದು)
  • ಕೊತ್ತುಂಬರಿ ಸೊಪ್ಪು
  • ಹೆಚ್ಚಿದ ಟೊಮೇಟೋ - 1
  • ಹೆಚ್ಚಿದ ಉಳ್ಳಾಗಡ್ಡೆ - 1
  • ಉಪ್ಪು - 1 ಚಮಚ
ತಯಾರಿಸುವ ವಿಧಾನ:

1.ಹೆಸರು ಬೇಳೆ/ ತೊಗರಿಬೇಳೆ + ಚಿಟಿಕೆ ಅರಿಶಿನ + 1/2 ಚಮಚ ಅಡುಗೆ ಎಣ್ಣೆ -- ಇವನ್ನು ಕುಕ್ಕರ್ ನಲ್ಲಿ ಸರಿಯಾಗಿ ಬೇಯಿಸಿ ಇಟ್ಟುಕೊಳ್ಳಿ (4-5 ಸೀಟಿ).

2.ತೊವೆಗೆ ಒಗ್ಗರಣೆ ::
  • ತೊವೆ ಮಾಡಬೇಕೆಂದಿರುವ ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ.
  • ಉದ್ದಿನ ಬೇಳೆ (1 ಚಮಚ) + ಸಾಸಿವೆ (1/2 ಚಮಚ) + ಜೀರಿಗೆ (2 ಚಮಚ) + ಬೆಳ್ಳುಳ್ಳಿ / ಇಂಗು + ಅರಿಶಿನ + 1 ಒಣ ಮೆಣಸು + 1 ಹಸಿ ಮೆಣಸು + ಹೆಚ್ಚಿದ ಉಳ್ಳಾಗಡ್ಡೆ + ಹೆಚ್ಚಿದ ಟೊಮೇಟೋ + ಕೊತ್ತುಂಬರಿ ಸೊಪ್ಪು + ಉಪ್ಪು.
  • ಇವೆಲ್ಲವನ್ನು ಹಾಕಿ 2 ನಿಮಿಷ ಬೇಯಲು ಬಿಸಿ ಬಾಂಡ್ಲಿಯಲ್ಲೇ ಬಿಡಿ.
3.ಇಷ್ಟು ತಯಾರು ಮಾಡುವಷ್ಟರಲ್ಲಿ ಕುಕ್ಕರ್ ನ ಪ್ರೆಶರ್ ಇಳಿದಿರುತ್ತದೆ.

4. ಕುಕ್ಕರ್ ಇಂದ ಬೆಂದ ಬೇಳೆಯನ್ನು ತೊವೆಯ ಒಗ್ಗರಣೆಯ ಪಾತ್ರೆಯಲ್ಲಿ ಹಾಕಿ.

5.ಚೆನ್ನಾಗಿ ಕಲುಕಿ ..... ತೊವೆ ತಯಾರು .....!!!


ತೊವೆಯ ಬಗ್ಗೆ ಇತರೆ ಮಾಹಿತಿಗಳು:
  1. ಮಾಡಲು ಬೇಕಾಗುವ ಅಂದಾಜು ಸಮಯ -- 15 ನಿಮಿಷಗಳು.
  2. ತೊವೆಯಲ್ಲಿ ಬೇಳೆ ಕಾಳು ಜಾಸ್ತಿ ಇರುವದರಿಂದ ಪ್ರೋಟೀನ್ ಅಂಶ ಹೇರಳವಾಗಿರುತ್ತದೆ.
  3. ಫ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.