ಬೇಕಾಗುವ ಪದಾರ್ಥಗಳು
:
- ಚೆನ್ನಾಗಿ ತೊಳೆದ ಬದನೇಕಾಯಿ : 1
- ತೆಂಗಿನ ತುರಿ : ½ ಕಪ್
- ಗಟ್ಟಿ ಮೊಸರು : ½ ಕಪ್
- ಉಪ್ಪು : ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- ಉದ್ದಿನ ಬೇಳೆ : 1/2 ಚಮಚ
- ಹಸಿಮೆಣಸಿನ ಕಾಯಿ : 2
- ಒಣಮೆಣಸಿನ ಕಾಯಿ : 2
- ಎಳ್ಳು: 1/2 ಚಮಚ
- ಕೊಬ್ಬರಿ ಎಣ್ಣೆ : 2 ಚಮಚ
- ಈರುಳ್ಳಿ : 1/2
- ಸಾಸಿವೆ ಕಾಳು: 1/2 ಚಮಚ
- ಕರಿಬೇವಿನ ಎಸಳು: 6
ಮಾಡುವ ವಿಧಾನ
:
- ಬದನೆಕಾಯಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಸವರಿಕೊಂಡು, ಒಲೆಯ
ಉರಿಯಲ್ಲಿ ಸಿಪ್ಪೆ ಕಪ್ಪಾಗುವಷ್ಟು ಸುಡಬೇಕು.
- ಸುಟ್ಟ ಬದನೆಕಾಯಿ ತಣ್ಣಗಾದನಂತರ, ಸಿಪ್ಪೆಯನ್ನು ತೆಗೆದು ಚೆನ್ನಾಗಿ
ಜಜ್ಜಿ.
- ಒಗ್ಗರಣೆ: ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಮೇಲೆ ಹೇಳಿದ ಒಗ್ಗರಣೆ
ಪದಾರ್ಥಗಳನ್ನು ಹಾಕಿ.
- ಈಗ ಮೇಲೆ ಹೇಳಿದ ಜಜ್ಜಿದ ಬದನೆಕಾಯಿಗೆ ಒಗ್ಗರಣೆಯನ್ನು ಸೇರಿಸಿ
+ ನುಣ್ಣಗೆ ರುಬ್ಬಿದ ತೆಂಗಿನ ತುರಿ + ½
ಕಪ್ ಮೊಸರು + ಉಪ್ಪು ಇವನ್ನು ಚೆನ್ನಾಗಿ ಕಲಸಿ.
- ಈಗ ಬಾಯಲ್ಲಿ ನೀರೂರಿಸುವ ಬದನೆಕಾಯಿ ಬಜ್ಜಿ (ಹಶಿ) ತಯಾರು !!!
ಇತರೆ ಮಾಹಿತಿ
:
- ಮಾಡಲು ಬೇಕಾಗುವ ಸಮಯ 15 ನಿಮಿಷ.
- ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದು ಸವಿಯಿರಿ.
ಕೃಪೆ: ಶ್ವೇತಾ ಶಶಿಕಾಂತ್ ಹೆಗಡೆ, ಬೆಂಗಳೂರು.
No comments:
Post a Comment