ತೊವೆ (Tove)

ಚಳಿಗಾಲದ ಊಟದಲ್ಲಿ ಬಿಸಿಬಿಸಿ ತೊವೆ ಊಟದ ಜೊತೆಗಿದ್ದರೆ ಅದರ ಮಜವೇ ಬೇರೆ !!!!

ಬೇಕಾಗುವ ಪದಾರ್ಥಗಳು:

  • ಹೆಸರು ಬೇಳೆ / ತೊಗರಿ ಬೇಳೆ (ಅಥವಾ ಇವೆರಡೂ 2:1 ಪ್ರಮಾಣದಲ್ಲಿ) -- 1/2 ಲೋಟ.
  • ನಿಂಬು - 1/2
  • ಅರಿಶಿನ - 1 ಚಮಚ

ಒಗ್ಗರಣೆ ಪದಾರ್ಥಗಳು:
  • ಉದ್ದಿನಬೇಳೆ -- 1 ಚಮಚ
  • ಸಾಸಿವೆ ಕಾಳು -- 1/2 ಚಮಚ
  • ಜೀರಿಗೆ - 2 ಚಮಚ
  • ಒಣ ಮೆಣಸು -- 1 (ಇಲ್ಲವಾದರೆ 1/2 ಚಮಚ ಮೆಣಸಿನ ಪುಡಿ)
  • ಹಸಿ ಮೆಣಸು - 1
  • ಜಜ್ಜಿದ ಬೆಳ್ಳುಳ್ಳಿ ಎಸಳು -- 2 (ಇಂಗು ಸ್ವಲ್ಪ ಹಾಕಬಹುದು)
  • ಕೊತ್ತುಂಬರಿ ಸೊಪ್ಪು
  • ಹೆಚ್ಚಿದ ಟೊಮೇಟೋ - 1
  • ಹೆಚ್ಚಿದ ಉಳ್ಳಾಗಡ್ಡೆ - 1
  • ಉಪ್ಪು - 1 ಚಮಚ
ತಯಾರಿಸುವ ವಿಧಾನ:

1.ಹೆಸರು ಬೇಳೆ/ ತೊಗರಿಬೇಳೆ + ಚಿಟಿಕೆ ಅರಿಶಿನ + 1/2 ಚಮಚ ಅಡುಗೆ ಎಣ್ಣೆ -- ಇವನ್ನು ಕುಕ್ಕರ್ ನಲ್ಲಿ ಸರಿಯಾಗಿ ಬೇಯಿಸಿ ಇಟ್ಟುಕೊಳ್ಳಿ (4-5 ಸೀಟಿ).

2.ತೊವೆಗೆ ಒಗ್ಗರಣೆ ::
  • ತೊವೆ ಮಾಡಬೇಕೆಂದಿರುವ ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ.
  • ಉದ್ದಿನ ಬೇಳೆ (1 ಚಮಚ) + ಸಾಸಿವೆ (1/2 ಚಮಚ) + ಜೀರಿಗೆ (2 ಚಮಚ) + ಬೆಳ್ಳುಳ್ಳಿ / ಇಂಗು + ಅರಿಶಿನ + 1 ಒಣ ಮೆಣಸು + 1 ಹಸಿ ಮೆಣಸು + ಹೆಚ್ಚಿದ ಉಳ್ಳಾಗಡ್ಡೆ + ಹೆಚ್ಚಿದ ಟೊಮೇಟೋ + ಕೊತ್ತುಂಬರಿ ಸೊಪ್ಪು + ಉಪ್ಪು.
  • ಇವೆಲ್ಲವನ್ನು ಹಾಕಿ 2 ನಿಮಿಷ ಬೇಯಲು ಬಿಸಿ ಬಾಂಡ್ಲಿಯಲ್ಲೇ ಬಿಡಿ.
3.ಇಷ್ಟು ತಯಾರು ಮಾಡುವಷ್ಟರಲ್ಲಿ ಕುಕ್ಕರ್ ನ ಪ್ರೆಶರ್ ಇಳಿದಿರುತ್ತದೆ.

4. ಕುಕ್ಕರ್ ಇಂದ ಬೆಂದ ಬೇಳೆಯನ್ನು ತೊವೆಯ ಒಗ್ಗರಣೆಯ ಪಾತ್ರೆಯಲ್ಲಿ ಹಾಕಿ.

5.ಚೆನ್ನಾಗಿ ಕಲುಕಿ ..... ತೊವೆ ತಯಾರು .....!!!


ತೊವೆಯ ಬಗ್ಗೆ ಇತರೆ ಮಾಹಿತಿಗಳು:
  1. ಮಾಡಲು ಬೇಕಾಗುವ ಅಂದಾಜು ಸಮಯ -- 15 ನಿಮಿಷಗಳು.
  2. ತೊವೆಯಲ್ಲಿ ಬೇಳೆ ಕಾಳು ಜಾಸ್ತಿ ಇರುವದರಿಂದ ಪ್ರೋಟೀನ್ ಅಂಶ ಹೇರಳವಾಗಿರುತ್ತದೆ.
  3. ಫ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.

No comments:

Post a Comment