ಪೊಗಡೆ ಸೋಡಗೆ(ಅಂಗೀಕಸೆ) ಪಲ್ಯ


ಬೇಕಾಗುವ ಪದಾರ್ಥಗಳು : 
  • ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿದ ಸೊಡಗೆ: 1 
  • ಹುಣಿಸೆ ಹಣ್ಣಿನ ರಸ: 1 ಚಮಚ 
  • ಉಪ್ಪು : ರುಚಿಗೆ ತಕ್ಕಷ್ಟು 
  • ಬೆಲ್ಲ – 1 ಚಮಚ
  • ಹಸಿ ತೆಂಗಿನ ತುರಿ.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
  • ಉದ್ದಿನಬೇಳೆ : 1 ಚಮಚ
  • ಇಂಗು : 1 ಚಿಟಿಕೆ
  • ಕೊಬ್ಬರಿ ಎಣ್ಣೆ : 1.5 ಚಮಚ
  • ಸಾಸಿವೆ ಕಾಳು: 1 ಚಮಚ
  • ಹಸಿಮೆಣಸಿನ ಕಾಯಿ : 2 
  • ಅರಿಶಿನ – 1/4 ಚಮಚ
 ಮಾಡುವ ವಿಧಾನ : 
  • ಒಗ್ಗರಣೆಗೆ: ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಕಾಳು + ಇಂಗು + ಉದ್ದಿನಬೇಳೆ + ಹಸಿಮೆಣಸಿನಕಾಯಿ + ಅರಿಶಿನ ಇವೆಲ್ಲವನ್ನು ಹಾಕಿ.
  • ಈಗ, ಹೆಚ್ಚಿದ ಪೊಗಡೆ ಸೋಡಗೆಯನ್ನು ಪಾತ್ರೆಗೆ ಹಾಕಿ + ಹುಣಿಸೆ ಹಣ್ಣಿನ ರಸ + ಉಪ್ಪು + ಬೆಲ್ಲ + ಸ್ವಲ್ಪ ನೀರು + ಬೇಕಾದರೆ ಸ್ವಲ್ಪ ಸಾಂಬಾರ್ ಪುಡಿ – ಪಾತ್ರೆಯ ಮುಚ್ಚಳವನ್ನು ಮುಚ್ಚಿ ಚೆನ್ನಾಗಿ ಬೇಯಿಸಿ.
  • ಬೇಯಿಸಿದ ಪಲ್ಯದ ಮಿಶ್ರಣದ ಮೇಲೆ ಹಸಿ ತೆಂಗಿನ ತುರಿಯನ್ನು ಹಾಕಿ ಅಲಂಕರಿಸಿ.
  • ಈಗ ರುಚಿ ರುಚಿಯಾದ ಸೋಡಗೆ ಪಲ್ಯ ತಯಾರು...
ಇತರೆ ಮಾಹಿತಿ : 
  • ಮಾಡಲು ಬೇಕಾಗುವ ಸಮಯ 20 ನಿಮಿಷ.
  • ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದು ಸವಿಯಿರಿ.  
ಕೃಪೆ : Radha Bhat, Mapusa, Goa 

No comments:

Post a Comment