ಮಾವಿನ ಹಣ್ಣಿನ ಸಾಸ್ಮೆ. (ಸಾಸಿವೆ)


ಬೇಕಾಗುವ ಪದಾರ್ಥಗಳು : 
  • ಸಾಸಿವೆ ಮಾವಿನಹಣ್ಣು: 1 (ಸ್ವಲ್ಪ ಚಿಕ್ಕದಾಗಿ ಹುಳಿಯಾಗಿರುತ್ತದೆ)
  • ಉಪ್ಪು : ರುಚಿಗೆ ತಕ್ಕಷ್ಟು 
  • ಬೆಲ್ಲ – 1 ಚಮಚ
  • ಹಸಿ ತೆಂಗಿನ ತುರಿ – 3 ಚಮಚ
  • ಹಸಿಮೆಣಸಿನ ಕಾಯಿ : 2 
  • ಅರಿಶಿನ – 1/4 ಚಮಚ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
  • ಉದ್ದಿನಬೇಳೆ : 1 ಚಮಚ
  • ಕೊಬ್ಬರಿ ಎಣ್ಣೆ : 1.5 ಚಮಚ
  • ಸಾಸಿವೆ ಕಾಳು: 1 ಚಮಚ
  • ಒಣ ಮೆಣಸಿನಕಾಯಿ: 1
 ಮಾಡುವ ವಿಧಾನ : 
  • ಮಾವಿನಹಣ್ಣಿನ ಸಿಪ್ಪೆಯನ್ನು ತೆಗೆದು – ಚೆನ್ನಾಗಿ ನುರಿದು – ಉಪ್ಪು ಮತ್ತು ಬೆಲ್ಲವನ್ನು ಹಾಕಿ ಇಟ್ಟುಕೊಳ್ಳಬೇಕು.
  • ತೆಂಗಿನಕಾಯಿ ತುರಿ + ಸಾಸಿವೆಕಾಳು + ಅರಿಷಿನ + ಹಸಿಮೆಣಸಿನ ಕಾಯಿ à ಮಿಕ್ಸರ್ ನಲ್ಲಿ ಬೀಸಿ à ಮೇಲಿನ ಮಾವಿನಹಣ್ಣಿನ ಪಾತ್ರೆಗೆ ಸೇರಿಸಿ
  • ಒಗ್ಗರಣೆಗೆ: ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಕಾಳು + ಉದ್ದಿನಬೇಳೆ + ಒಣಮೆಣಸಿನಕಾಯಿ ಇವೆಲ್ಲವನ್ನು ಹಾಕಿ.
  • ಈಗ, ಮಾವಿನಹಣ್ಣಿನ ಪಾತ್ರೆಗೆ ಒಗ್ಗರಣೆಯನ್ನು ಸೇರಿಸಿ.
  • ಈಗ ರುಚಿ ರುಚಿಯಾದ ಮಾವಿನ ಹಣ್ಣಿನ ಸಾಸ್ಮೆ ತಯಾರು...
ಇತರೆ ಮಾಹಿತಿ : 
  • ಮಾಡಲು ಬೇಕಾಗುವ ಸಮಯ 20 ನಿಮಿಷ.
  • ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದು ಸವಿಯಿರಿ.  
 ಕೃಪೆ : Ashwini Bhat, Mapusa, Goa 

No comments:

Post a Comment