- ಪಾಲಕ್ ಸೊಪ್ಪು - ಒಂದು ಕಟ್ಟು.
- ಜೀರಿಗೆ- 2 tbs
- ಕಾಳು ಮೆಣಸು - 3
- ಹಸಿ ಮೆಣಸು- 1
- ಮೊಸರು - 1 ಕಪ್
- ನೀರು ಬೆಲ್ಲ - 1/2 tbs
- ಅಡುಗೆ ಎಣ್ಣೆ - 1 tbs
- ಕಾಯಿ ತುರಿ - 3 tbs
- ರುಚಿಗೆ ಬೇಕಷ್ಟು ಉಪ್ಪು
ಮಾಡುವ ವಿಧಾನ :
- 1 ಚಮಚ ಅಡುಗೆ ಎಣ್ಣೆ + ಸ್ವಲ್ಪ ಜೀರಿಗೆ + ಜಜ್ಜಿದ ಹಸಿ ಮೆಣಸು ಅಥವಾ ಕಾಳು ಮೆಣಸು : ಇವನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ.
- ಚೆನ್ನಾಗಿ ತೊಳೆದು ಕತ್ತರಿಸಿದ ಪಾಲಕ್ ಸೊಪ್ಪನ್ನು ಬಾಂಡ್ಲಿಗೆ ಹಾಕಿ.
- ಹದವಾದ ಬೆಂಕಿಯ ಉರಿಯಲ್ಲಿ 5-6 ನಿಮಿಷ ಬೇಯಿಸಿ (ಸೊಪ್ಪು ಬೇಯುವವರೆಗೆ)
- ಗ್ಯಾಸ್ ಬಂದು ಮಾಡಿ, ಬಾಂಡ್ಲಿ ತಂಪಾಗಲು ಬಿಡಿ.
- ಈ ಮಿಶ್ರಣ + 3 tbs ಕಾಯಿತುರಿ + ನೀರು ಬೆಲ್ಲ + ಉಪ್ಪು + ಸ್ವಲ್ಪ ನೀರು :: ಎಲ್ಲ ಹಾಕಿ ಮಿಕ್ಸಿಯಲ್ಲಿ ರುಬ್ಬಿ.
- ಈ ಮೇಲಿನ ಮಿಶ್ರಣವನ್ನು ಮೊಸರಿಗೆ ಹಾಕಿ.(ಮೊಸರನ್ನು ಹಾಕಿಯೂ ಮಿಕ್ಸಿಯಲ್ಲಿ ರುಬ್ಬಬಹುದು)
- ಪಾಲಕ್ ಸೊಪ್ಪಿನ ತಂಬಳಿ ತಯಾರು ...
ಇತರೆ ಮಾಹಿತಿ:
- ಮಾಡಲು ಬೇಕಾಗುವ ಸಮಯ 10 ನಿಮಿಷ.
- ಇದನ್ನು ಪ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.
- ಇದನ್ನು ಸೋಸಿ ಕುಡಿಯಲೂ ಬಳಸಬಹುದು.
ತ೦ಬ್ಳಿಗೆ ಸಕ್ಕರೆ ಬದಲು (ನೀರ್) ಬೆಲ್ಲ ಹಾಕಿರೆ ದೇಹಕ್ಕೆ ಒಳ್ಳೆದು....
ReplyDeleteಕೊಬ್ಬರಿ ತುರಿ ಹಾಕಿ ಮಾಡಿದ್ರೇ ಇನ್ನೂ ಚೆನ್ನಾಗಿರುತ್ತದೆ
ReplyDeleteThis comment has been removed by a blog administrator.
ReplyDeleteಕೊಬ್ಬರಿ ತುರಿ ಹಾಕಿ ಮಾಡಿದ್ರೇ ಇನ್ನೂ ಚೆನ್ನಾಗಿರುತ್ತದೆ
ReplyDeleteಕೊಬ್ಬರಿ ತುರಿ ಹಾಕಿ ಮಾಡಿದ್ರೇ ಇನ್ನೂ ಚೆನ್ನಾಗಿರುತ್ತದೆ
ReplyDelete