ಹಲಸಿನಕಾಯಿ ಚಕ್ಕೆ ಪೊಳ್ದ್ಯ


ಬೇಕಾಗುವ ಪದಾರ್ಥಗಳು :
 • ಹಲಸಿನಕಾಯಿ ತೊಳೆ ಬೀಜದ ಜೊತೆಗೆ : 20 ರಿಂದ 30
 • ಲಿಂಬು (ದೊಡ್ಡದು) : 1
 • ನೀರು : 1/2 ಲಿಟರ್ 
 • ಕರಿಬೇವು : 10 ಎಲೆಗಳು 
 • ಉಪ್ಪು : ರುಚಿಗೆ ತಕ್ಕಷ್ಟು
 • ಹಸಿ ಮೆಣಸು ( ಸಣ್ಣ ಮೆಣಸು ) : 5 ರಿಂದ 8 
 ಒಗ್ಗರಣೆಗೆ :
 • ಕೊಬ್ಬರಿ ಎಣ್ಣೆ : 4 ಚಮಚ. 
 • ಇಂಗು : 2 ಚಿಟಿಕೆ 
 • ಜೀರಿಗೆ : 1 ಚಮಚ 
 • ಸಾಸಿವೆ : 1 ಚಮಚ
ಮಾಡುವ ವಿಧಾನ :
 • ಮೊದಲಿಗೆ ಹಲಸಿನಕಾಯಿಯನ್ನು ತೊಳೆಯನ್ನು ಚಿಕ್ಕದಾಗಿ ಕತ್ತರಿಸಬೇಕು.
 • ಹಲಸಿನ ಬೀಜವನ್ನು ಸ್ಪಲ್ಪ ಜಜ್ಜಿಕೊಳ್ಳಬೇಕು.
 • ನಂತರ ಇವೆರಡನ್ನು ಪಾತ್ರೆಯಲ್ಲಿ ಹಾಕಿ, ಇವು ಮುಳುಗುವವರೆಗೆ ನೀರು, ರುಚಿಗೆ ತಕ್ಕಷ್ಟು ಉಪ್ಪು, ಲಿಂಬು ಮತ್ತು ಕರಿಬೇವು ಹಾಕಿ ಬೇಯಿಸಿಕೊಳ್ಳಬೇಕು.
 • ಬೇಯಿಸಿಕೊಂಡ ಮಿಶ್ರಣ ತುಂಬಾ ನೀರು ನೀರಾಗಿದ್ದರೆ, ಸ್ವಲ್ಪ ಬೇಯಿಸಿಕೊಂಡ ತೊಳೆಯನ್ನು ಮಿಕ್ಸರಿನಲ್ಲಿ ಹಾಕಿ ರುಬ್ಬಿಕೊಂಡು ಮಿಶ್ರಣಕ್ಕೆ ಸೇರಿಸಬೇಕು.
 • ಒಗ್ಗರಣೆ ಸೌಟಿನಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ನಂತರ ಇಂಗು + ಜೀರಿಗೆ + ರುಬ್ಬಿಕೊಂಡ ಹಸಿಮೆಣಸು + ಸಾಸಿವೆಯ ಒಗ್ಗರಣೆಯನ್ನು ಬೇಯಿಸಿಟ್ಟುಕೊಂಡ ಮಿಶ್ರಣಕ್ಕೆ ಹಾಕಬೇಕು.
 • ಒಗ್ಗರಣೆಯನ್ನು ಹಾಕಿದ ಮೇಲೆ 5 ನಿಮಿಷ ಕುದಿಸಬೇಕು.
ಇತರೆ ಮಾಹಿತಿ:
 • ಮಾಡಲು ಬೇಕಾಗುವ ಸಮಯ 20 ನಿಮಿಷ.
 • ಹಲಸಿನಕಾಯಿ ಸೀಜನ್ ನಲ್ಲಿ ಹವ್ಯಕರ ಮನೆಯ ಖಾಯಂ ಪದಾರ್ಥಗಳಲ್ಲೊ೦ದು.
 • ಇದನ್ನು ಪ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.
 • ಅನ್ನದ ಜೊತೆಗೆ ಕಲಸಿ ಊಟ ಮಾಡಿ ರುಚಿ ನೊಡಿ.
Vinuta. Hegde Keshinmane, Netherlands.

1 comment: