ಹಾಗಲಕಾಯಿ ಪಲ್ಯ

ಬೇಕಾಗುವ ಪದಾರ್ಥಗಳು :
 • ಹಾಗಲಕಾಯಿ - 2
 • ಉಪ್ಪು
 • 4 ಚಮಚ ತೆಂಗಿನ ಎಣ್ಣೆ
 • ಸಾಸಿವೆ - 1/2 ಚಮಚ
 • ಉದ್ದಿನಬೇಳೆ - 1
 • ಸ್ವಲ್ಪ ಅರಿಶಿನ
 • ಹಸಿ ಮೆಣಸಿನಕಾಯಿ - 2
 • ಕರಿಬೇವಿನ ಎಸಳು - 3
 • 1 ಕಪ್ ಕಾಯಿ ತುರಿ
 • ಸ್ವಲ್ಪ ಹುಳಿಪುಡಿ

ಹಾಗಲಕಾಯಿಯ ಕಹಿ ತೆಗೆಯುವ ವಿಧಾನ:
 • ಸಣ್ಣದಾಗಿ ಹೆಚ್ಚಿದ ಹಾಗಲಕಾಯಿಗೆ 1 ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ನುರಿಯಬೇಕು.
 • ನೀರನ್ನು ಈ ಮಿಶ್ರಣಕ್ಕೆ ಹಾಕಬಾರದು.
 • ಇದನ್ನು 2 ಗಂಟೆ ಹಾಗೆಯೇ ಬಿಡಬೇಕು.
 • ಕೈನಲ್ಲಿ ಚೆನ್ನಾಗಿ ಹಿಂಡಿ, ರಸವನ್ನು ಬೇರ್ಪಡಿಸಬೇಕು.

ಮಾಡುವ ವಿಧಾನ :
 • ಬಾಣಲಿಯಲ್ಲಿ : 4 ಚಮಚ ತೆಂಗಿನ ಎಣ್ಣೆ + ಸಾಸಿವೆ - 1/2 ಚಮಚ + ಉದ್ದಿನಬೇಳೆ + ಸ್ವಲ್ಪ ಅರಿಶಿನ + 2 ಹಸಿ ಮೆಣಸಿನಕಾಯಿ + 3 ಕರಿಬೇವಿನ ಎಸಳು : ಇವನ್ನು ಹಾಕಿ ಹುರಿಯಿರಿ
 • ಸ್ವಲ್ಪ ಹೊರಿದ ಕೂಡಲೇ ಕಹಿ ತೆಗೆದ ಹಾಗಲಕಾಯಿಯ ಹೋಳನ್ನು ಹಾಕಿ, ಆಗಾಗ್ಗೆ ಕದಡುತ್ತಿರಿ.
 • ಉಪ್ಪು ಮತ್ತು ನೀರನ್ನು ಹಾಕುವದು ಬೇಡ.
 • ಸ್ವಲ್ಪ ಬೆಲ್ಲವನ್ನೂ ಹಾಕಿ.
 • ಕೆಂಪಗೆ ಹುರಿದ ಮೇಲೆ ಸ್ವಲ್ಪ ಹುಳಿಪುಡಿ ಹಾಕಿ.
 • ಇಳಿಸಿದ ಮೇಲೆ 1 ಕಪ್ ಕಾಯಿ ತುರಿ ಹಾಕಿ ಕಲಸಿ.
ಇತರೆ ಮಾಹಿತಿ :
 • ರಕ್ತ ಶುದ್ಧೀಕರಿಸುವದರಿಂದ ಆರೋಗ್ಯಕ್ಕೆ ಒಳ್ಳೆಯದು
 • ಮಾಡಲು ಬೇಕಾಗುವ ಸಮಯ 20 ನಿಮಿಷ.
ಕೃಪೆ : Usha Suresh Joshi, Bangalore.

No comments:

Post a Comment