ಬೇಕಾಗುವ ಪದಾರ್ಥಗಳು :
- ಒಂದೆಲಗದ ಸೊಪ್ಪು -- 15
- ಜೀರಿಗೆ - 1/2 ಚಮಚ
- ಎಳ್ಳು - 1/2 ಚಮಚ
- ಸಾಸಿವೆ - 1/2 ಚಮಚ
- ಒಣ ಮೆಣಸು - 2
- ಕಾಯಿತುರಿ - 1/2 ಕಪ್
- ಉಪ್ಪು - 1 ಚಮಚ
- ಅಡುಗೆ ಎಣ್ಣೆ
ಮಾಡುವ ವಿಧಾನ :
- ಒಂದೆಲಗದ ಸೊಪ್ಪನ್ನು ನುಣ್ಣಗೆ ಬೀಸಿ, ಅರಿಸಿ ಇಟ್ಟುಕೊಳ್ಳಿ
- ತೆಂಗಿನಕಾಯಿ + ಸ್ವಲ್ಪ ಜೀರಿಗೆ + ಸ್ವಲ್ಪ ಎಳ್ಳು : ಇವನ್ನು ಮಿಕ್ಸಿಯಲ್ಲಿ ರುಬ್ಬಿ -- ನಂತರ ಒಂದೆಲಗದ ರಸಕ್ಕೆ ಸೇರಿಸಿ.
- ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ
- ಈಗ : ಎಣ್ಣೆ + ಒಣಮೆಣಸು + ಎಳ್ಳು + ಜೀರಿಗೆ + ಸಾಸಿವೆ : ಇವುಗಳ ಒಗ್ಗರಣೆ ನೀಡಿ
- ಒಂದೆಲಗದ ಕುಡಿ ತಂಬಳಿ ಈಗ ಸವಿಯಲು ತಯಾರು !!!
ಇತರೆ ಮಾಹಿತಿ :
- ಸಿಹಿ ಬೇಕಾಗುವವರು ಸ್ವಲ್ಪ ಆಲೆಮನೆ ಬೆಲ್ಲ ಸೇರಿಸಬಹುದು.
- ಜ್ವರ, ನೆಗಡಿ, ಕೆಮ್ಮಿಗೆ ಈ ತಂಬಳಿ ಒಂದು ಔಷಧವೂ ಹೌದು.
- ಒಂದೆಲಗದ ಸೊಪ್ಪಿನ ರಸ + ಬೆಲ್ಲ + ನೀರು + ಬೋಳುಕಾಳಿನ ಹುಡಿ ಹಾಕಿ ಕುದಿಸಿ > ಹಾಲು ಹಾಕಿ > ಕಷಾಯದಂತೆ ಕುಡಿಯಬಹುದು.
- ಮಾಡಲು ಬೇಕಾಗುವ ಸಮಯ 10 ನಿಮಿಷ.
ಕೃಪೆ : ShubhaNaveen Hegde, Bangalore.
No comments:
Post a Comment