ಸಿಹಿ ಮೊಸರು ಬಜ್ಜಿ (ಸಿಯಾಬಜ್ಜಿ)

ಬೇಕಾಗುವ ಪದಾರ್ಥಗಳು : 
  • ಮೊಸರು : 1 ದೊಡ್ಡ ಕಪ್ 
  • ಬೆಲ್ಲ : 2 ಟಿ ಸ್ಪೂನ್  
  • ಲಿಂಬು : 2 ಚಮಚ 
  • ಉಪ್ಪು : ರುಚಿಗೆ ತಕ್ಕಷ್ಟು 
  • ಸ೦ಡಿಗೆ ಮೆಣಸು : 2 ರಿಂದ 3 
  • ಕೆಂಪು ಮೆಣಸಿನಕಾಯಿ : 1 
 ಒಗ್ಗರಣೆಗೆ : 
  • ಊದ್ದಿನಬೇಳೆ : 1 ಚಮಚ 
  • ಇಂಗು : 1 ಚಿಟಿಕೆ 
  • ಎಳ್ಳು : 1 ಚಮಚ 
  • ಸಾಸಿವೆ : 1 ಚಮಚ. 
 ಮಾಡುವ ವಿಧಾನ : 
  • ಮೊದಲಿಗೆ ಪಾತ್ರೆಯಲ್ಲಿ ಮೊಸರನ್ನು ಹಾಕಿ ಅದಕ್ಕೆ ಬೆಲ್ಲ + ಲಿಂಬು ರಸ + ಉಪ್ಪು ಸೇರಿಸಬೇಕು. 
  • ನಂತರ ಒಗ್ಗರಣೆಗೆ, ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಉದ್ದಿನಬೇಳೆ, ಕೆಂಪುಮೆಣಸಿನಕಾಯಿ, ಸ೦ಡಿಗೆ ಮೆಣಸು, ಇಂಗು, ನಂತರ ಎಳ್ಳು ಕೊನೆಯಲ್ಲಿ ಸಾಸಿವೆ ಹಾಕಬೇಕು. 
  • ಸಾಸಿವೆ ಸಿಡಿದ ಕೂಡಲೇ ಮೊಸರಿನ ಪಾತ್ರೆಗೆ ಹಾಕಬೇಕು. 
  • ಸಿಹಿ ಬಜ್ಜಿ ತಯಾರ್. 

ಇತರೆ ಮಾಹಿತಿ : 
  • ಮಾಡಲು ಬೇಕಾಗುವ ಸಮಯ 5 ನಿಮಿಷ. 
  • ಅನ್ನದ ಜೊತೆಗೆ ಸವಿದು ನೋಡಿ ಹೇಳಿ....  
 ಕೃಪೆ : Vinuta. Hegde Keshinmane, Netherlands.

No comments:

Post a Comment