ಬೇಕಾಗುವ ಪದಾರ್ಥಗಳು
:
- ಚೆನ್ನಾಗಿ ತೊಳೆದ ಸಾಂಬಾರು ಸೊಪ್ಪಿನ ಎಲೆ : 15
- ತುರಿದ ತೆಂಗಿನಕಾಯಿ : 1 ಕಪ್
- ಹುಣಿಸೆ ಹಣ್ಣು : 1/2 ಚಮಚ
- ಉಪ್ಪು : ರುಚಿಗೆ ತಕ್ಕಷ್ಟು
- ಹಸಿ ಮೆಣಸಿನಕಾಯಿ : 3 (ರುಚಿಗೆ ತಕ್ಕಷ್ಟು)
- ಕೊಬ್ಬರಿ ಎಣ್ಣೆ : 1.5 ಚಮಚ
- ಊದ್ದಿನಬೇಳೆ : 2 ಚಮಚ
- ಇಂಗು : 1 ಚಿಟಿಕೆ
- ಎಳ್ಳು : 1 ಚಮಚ
ಮಾಡುವ ವಿಧಾನ
:
- ಮೊದಲಿಗೆ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಉದ್ದಿನಬೇಳೆ + ಎಳ್ಳು + ಹಸಿಮೆಣಸಿನ ಕಾಯಿ + ಸಾಂಬಾರ್ ಸೊಪ್ಪು à ಇವೆಲ್ಲವನ್ನು ಸೇರಿಸಿ ಹುರಿದು ಇಟ್ಟುಕೊಳ್ಳಿ.
- ಈಗ ಮಿಕ್ಸರ್ ನಲ್ಲಿ ಮೇಲೆ ಹೇಳಿದ ಹುರಿದ ಪದಾರ್ಥಕ್ಕೆ + ಹುರಿ ತೆಂಗಿನಕಾಯಿ + ಹುಣಿಸೆಹಣ್ಣು + ಉಪ್ಪು + ಇಂಗು + ಸ್ವಲ್ಪ ನೀರು, ಎಲ್ಲವನ್ನೂ ಸೇರಿಸಿ ಚೆನ್ನಾಗಿ ಬೀಸಿ.
- ಈಗ ನಿಮಗಿಷ್ಟವಾದ ಸಾಂಬಾರ್ ಸೊಪ್ಪಿನ ಗೊಜ್ಜು ತಯಾರು ...
ಇತರೆ ಮಾಹಿತಿ
:
- ಮಾಡಲು ಬೇಕಾಗುವ ಸಮಯ 10 ನಿಮಿಷ.
- ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದು ನೋಡಿ ಹೇಳಿ....
ಕೃಪೆ : Radha Bhat, Mapusa, Goa
No comments:
Post a Comment