ಬೇಕಾಗುವ ಪದಾರ್ಥಗಳು:
- 2 ಲೋಟ ಅಕ್ಕಿ.
- 1 ಲೋಟ ಕಾಯಿತುರಿ.
- ಉಪ್ಪು.
ಮಾಡುವ ವಿಧಾನ:
- ಅಕ್ಕಿಯನ್ನು 8 ತಾಸು ನೀರಲ್ಲಿ ನೆನೆಸಿ ಇಡಿ.
- ನಂತರ ಅಕ್ಕಿಗೆ ಕಾಯಿ ತುರಿಯನ್ನು ಹಾಕಿ ಮಿಕ್ಸಿಯಲ್ಲಿ ಬೀಸಿ.
- 2 ಸ್ಪೂನ್ ಉಪ್ಪನ್ನು ಹಾಕಿ.
- ದೋಸೆಯ ಹಿಟ್ಟು ನೀರುನೀರಾಗುವಷ್ಟು ನೀರನ್ನು ಹಾಕಿ.
- ಈಗ ತೆಳ್ಳಗಾಗಿ ಪದರು ಬರುವಂತೆ ದೋಸೆಯನ್ನು ಬಂಡಿಯಲ್ಲಿ ಎರೆಯಿರಿ.
- ಈಗ ನಿಮ್ಮ ನೀರ್ ದೋಸೆ ಸವಿಯಲು ರೆಡಿ ಆಗಿ!!!
- ಇದಕ್ಕೆ ತೆಳ್ಳವ್ ದೋಸೆ ಎಂದೂ ಎನ್ನುತ್ತಾರೆ.
- ಕಾಯಿಸಿದ ಜೋನಿ ಬೆಲ್ಲದ (ಆಲೆಮನೆ ಬೆಲ್ಲ) ಜೊತೆ ತಿಂದರೆ ಸವಿ ದುಪ್ಪಟ್ಟು.
- ಎಷ್ಟು ಹೊತ್ತು ಕಾಯಿಸಿದರೂ ನೀರು ದೋಸೆ ಕೆಂಪಗಾಗುವದಿಲ್ಲ. ಆದ್ದರಿಂದ ದೋಸೆ ಬೆಂದಿದಿಯೋ ಇಲ್ಲವೋ ಎಂಬುದನ್ನು ನೀವೇ ಅಂದಾಜಿನ ಮೇಲೆ ನಿರ್ಧರಿಸಬೇಕು.
- ಮೊದಲನೆಯ ನೀರು ದೋಸೆ ಸರಿಯಾಗಿ ಬೇಯುವದಿಲ್ಲ ಅಥವಾ ಏಳುವದಿಲ್ಲ. ಆದ್ದರಿಂದ ಮೊದಲ ದೋಸೆ ಸರಿ ಆಗಿಲ್ಲವೆಂದು ಧೃತಿಗೆಡಬೇಡಿ!!. ಅದನ್ನು ದೇವರಿಗೆ ಬಿಟ್ಟು ಮತ್ತೆ ಪ್ರಯತ್ನಿಸಿ:)
- ಮಾಡಲು ಬೇಕಾಗುವ ಅಂದಾಜು ಸಮಯ - ದೋಸೆಗಳ ಸಂಖ್ಯೆ x 3 ನಿಮಿಷ/ದೋಸೆ.
How to adopt my mobile motorola atrix2 mb865, to read full article of http://www.havyakapaaka.blogspot.in/.
ReplyDeleteIn fact I can read only NEER DOSE and fallowing are some numbers.not
Kannada .