ಬೇಕಾಗುವ ಪದಾರ್ಥಗಳು:
- ಸಣ್ಣಗೆ ಹೆಚ್ಚಿದ ಕಣಲೆ - 2 ಕಪ್(ಬಿದಿರಿನ ಮೊಳಕೆ)
- ಕಡಲೆ -1/2ಕಪ್(ನೆನೆಸಿದ ಕಡಲೆ)
- ಈರುಳ್ಳಿ - 1
- ಹಸಿ ಮೆಣಶಿನ ಕಾಯಿ-2
- ಎಣ್ಣೆ - 2 ಚಮಚ
- ಇಂಗು - 1 ಚಿಟಿಕೆ
- ಅರಸಿಣ - ಸ್ವಲ್ಪ
- ಸಾಸಿವೆ - ಸ್ವಲ್ಪ
- ಕರಿಬೇವು - ಸ್ವಲ್ಪ
- ನಿಂಬೆರಸ - 1ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ತೆಂಗಿನ ತುರಿ-ಸ್ವಲ್ಪ(ಬೇಕಾದರೆ ಮಾತ್ರ)
ಮಾಡುವ ವಿಧಾನ:
- ಬಾಣೆಲೆಯಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ, ಕತ್ತರಿಸಿದ ಹಸಿಮೆಣಸು, ಕರಿಬೇವು ಹಾಕಿ.
- ಬಳಿಕ ಹೆಚ್ಚಿಟ್ಟ ಕಣಲೆ, ಕಡಲೆ,ಅರಿಸಿಣ, ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಕೈಯಾಡಿಸಿ.
- ನಂತರ ಸ್ವಲ್ಪ ಉರಿ ಕಡಿಮೆ ಮಾಡಿ ಪ್ಲೇಟ್ ಮುಚ್ಚಿಡಿ, ಆಗಾಗ ಕೈಯಾಡಿಸುತ್ತಿರಿ.
- 20 ನಿಮಿಷದ ಬಳಿಕ ಒಂದು ಹದಕ್ಕೆ ಕಣಲೆ ಹಾಗೂ ಕಡಲೆ ಬೆಂದ ಬಳಿಕ ಅದಕ್ಕೆ ಈರುಳ್ಳಿ ಸೇರಿಸಿ.
- ಉರಿ ಕಡಿಮೆ ಮಾಡಿ ಎಲ್ಲವೂ ಚೆನ್ನಾಗಿ ಹುರಿಯುವ ವರೆಗೆ ಕೈಯಾಡಿಸುತ್ತಿರಿ. ಹುರಿದ ಬಳಿಕ ಉರಿಯಾರಿಸಿ.
- ಅದಕ್ಕೆ ನಿಂಬೆರಸ ಸೇರಿಸಿ. ನಿಮಗೆ ಇಷ್ಟವಾಗುವಂತಿದ್ದಲ್ಲಿ ತೆಂಗನ ತುರಿ ಸೇರಿಸಬಹುದು.
- ಈಗ ರುಚಿ ರುಚಿಯಾದ ಕಣಲೆ ಪಲ್ಯ ಸವಿಯಲು ಸಿದ್ಧ
ಉಪಯುಕ್ತ ಮಾಹಿತಿ :
ಕೃಪೆ / Recipe by : Satish Shanbhag
No comments:
Post a Comment