ಬೇಕಾಗುವ ಪದಾರ್ಥಗಳು:
- 4 ಲೋಟ ಹಲಸಿನ ಸೊಳೆ
- ರವೆ 1/4 ಕಪ್
- ಬೆಲ್ಲ / ಸಕ್ಕರೆ - 1 ಕಪ್
- ರುಬ್ಬಿದ ಕಾಯಿತುರಿ 1 ಕಪ್
- 4 ಲೋಟ ನೀರು
ಮಾಡುವ ವಿಧಾನ:
- ರವೆಗೆ 4 ಲೋಟ ನೀರು ಹಾಕಿ ಕಾಯಿಸಿ.
- ಅದಕ್ಕೆ ಹಲಸಿನ ಸೊಳೆ + ಬೆಲ್ಲ ಅಥವಾ ಸಕ್ಕರೆ + ಕಾಯಿತುರಿ ಹಾಕಿ ನಿಧಾನವಾಗಿ ಕುದಿಸಿ
ಉಪಯುಕ್ತ ಮಾಹಿತಿ :
ಮಾಡಲು ಬೇಕಾಗುವ ಅಂದಾಜು ಸಮಯ -- 15 ನಿಮಿಷಗಳು.
ಕೃಪೆ: Satish Shanbhag, Valagalli, Kumta
ಬೇಕಾಗುವ ಪದಾರ್ಥಗಳು :
- ಹೀರೇಕಾಯಿ - 2 (ಸಿಪ್ಪೆ ಕೆತ್ತಿ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ.)
- ರವೆ : 4 ಚಮಚ ರವೆಯನ್ನುತುಪ್ಪದಲ್ಲಿ ಹುರಿದು ಇಟ್ಟುಕೊಳ್ಳಿ.
- ಬೆಲ್ಲ ಅಥವಾ ಸಕ್ಕರೆ : 1 ಕಪ್
- ಹಾಲು : 2 ಕಪ್
- ಯಾಲಕ್ಕಿ ಪುಡಿ : ಸ್ವಲ್ಪ ಪುಡಿ ಮಾಡಿಕೊಳ್ಳಿ.
- ದ್ರಾಕ್ಷಿ, ಗೋಡಂಬಿ : ಸ್ವಲ್ಪ
ಮಾಡುವ ವಿಧಾನ :
- 1 ಪಾತ್ರೆಯಲ್ಲಿ 2 ಕಪ್ ಹಾಲು + ಸ್ವಲ್ಪ ನೀರು ಸೇರಿಸಿ ಬಿಸಿಮಾಡಿಕೊಳ್ಳಬೇಕು.
- ಆ ಪಾತ್ರೆಯಲ್ಲಿ ಹೀರೇಕಾಯಿಯ ಕತ್ತರಿಸಿದ ಹೋಳುಗಳನ್ನು ಹಾಕಿ, ಕುದಿಸಿ.
- ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ.
- ಪಾಯಸ ಕುದಿಯುತ್ತಿರುವಾಗ ಮಿಶ್ರಣವನ್ನು ಚೆನ್ನಾಗಿ ಕಲಕುತ್ತಿರಿ.
- 5 ನಿಮಿಷಗಳ ನಂತರ 4 ಚಮಚ ರವೆಯನ್ನು ಸೇರಿಸಿ.(ರವೆಯನ್ನು ಸೇರಿಸವದರಿಂದ ಪಾಯಸ ಗಟ್ಟಿ ಆಗುತ್ತದೆ)
- ದ್ರಾಕ್ಷಿ, ಗೋಡಂಬಿ,ಯಾಲಕ್ಕಿ ಪುಡಿ ಇವನ್ನೂ ಹಾಕಿ.
- ಪಾಯಸದ ಮಿಶ್ರಣ ಗಟ್ಟಿ ಆದಂತೆ, ರುಚಿ ನೋಡಿ .... ಹೀರೇಕಾಯಿ ಪಾಯಸ ತಯಾರು...
ಇತರೆ ಮಾಹಿತಿಗಳು :
- ಮಾಡಲು ಬೇಕಾಗುವ ಸಮಯ 20 ನಿಮಿಷ........
- 1 ದಿನ ಇಟ್ಟೂ ತಿನ್ನಬಹುದು.....
Prepared by Satish MR & Experimented on Dinesh Hegde,Mattihalli Successfully :)