ಬೇಕಾಗುವ ಪದಾರ್ಥಗಳು :
- ಜೀರಿಗೆ - ೧ ಚಮಚ
- ಕೆಂಪು ಮೆಣಸು - ೪
- ತೆಂಗಿನ ತೂರಿ - ೨ ಚಮಚ
- ಮೊಸರು - ೧ ಲೋಟ
- ಸಾಸಿವೆ - ೧/೨ ಚಮಚ
- ಕರಿಬೇವಿನ ಎಲೆ - ೫-೬
- ತುಪ್ಪ - ೧ ಚಮಚ
- ಇಂಗು - ಚಿಟಿಕೆ
- ಉಪ್ಪು - ರುಚಿಗೆ
ಮಾಡುವ ವಿಧಾನ :
- ಮೊದಲು ಒಂದು ಚಮಚ ತುಪ್ಪದಲ್ಲಿ ತೆಂಗಿನ ತುರಿ, ಜೀರಿಗೆ ಹಾಗು ಕೆಂಪು ಮೆಣಸನ್ನು ಸ್ವಲ್ಪ ಕೆಂಪಗೆ ಹುರಿದುಕೊಳ್ಳಿ.
- ನಂತರ ಈ ಮಿಶ್ರಣವನ್ನು, ಸ್ವಲ್ಪ ನೀರು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
- ಇದಕ್ಕೆ ಮೊಸರು, ಉಪ್ಪು ಸೇರಿಸಿ ಮತ್ತೊಮ್ಮೆ ರುಬ್ಬಿ.
- ರುಬ್ಬಿದ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ.
- ತುಪ್ಪದಲ್ಲಿ ಸಾಸಿವೆ, ಇಂಗು, ಕರಿಬೇವಿನ ಎಲೆ ಹಾಕಿ ಒಗ್ಗರಣೆ ಮಾಡಿಕೊಂಡು, ಮೇಲಿನ ಮಿಶ್ರಣಕ್ಕೆ ಸೇರಿಸಿ.
ಉಪಯುಕ್ತ ಮಾಹಿತಿ :
- ಇದನ್ನು ತೆಳುವಾಗಿ ಮಾಡಿಕೊಂಡಲ್ಲಿ ಕುಡಿಯಲೂಬಹುದು.
- ಜೀರ್ಣಕಾರಿಯೂ ಹೌದು.
ಕೃಪೆ: ಸೌಮ್ಯ ಹೆಗಡೆ
jeerge tambli chalo agittu :) Very helpful site.
ReplyDeleteUnable to read blank except some digits.
DeleteUsing Motorola Atrix2 (MB865