ಬೇಕಾಗುವ ಸಾಮಗ್ರಿಗಳು
- ಕಡಲೆಬೇಳೆ - ೨ ಕಪ್
- ಬೆಲ್ಲ - ೨ ೧/೨ ಕಪ್
- ಉಪ್ಪು - ಚಿಟಿಕೆ
- ತೆಂಗಿನ ತುರಿ - ೧ ಕಪ್
- ಏಲಕ್ಕಿ ಪುಡಿ - ೧/೨ ಚಮಚ
- ನೀರು - ೩-ಕಪ್
ಮಾಡುವ ವಿಧಾನ
- ಮೊದಲು ಕಡಲೇಬೇಳೆಯನ್ನು ೪ ಕಪ್ ನೀರಿನಲ್ಲಿ ೩-೪ ತಾಸು ನೆನೆಸಿ.
- ನಂತರ ಅದನ್ನ ತೊಳೆದು, ೩ ಕಪ್ ನೀರಿನಲ್ಲಿ ಬೇಯಲು ಇಡಿ.
- ಚೆನ್ನಾಗಿ ಕುಡಿಯುತ್ತಿರುವಾಗ, ತೆಂಗಿನ ತುರಿ, ಬೆಲ್ಲ, ಉಪ್ಪು ಸೇರಿಸಿ.
- ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
- ಆಗಾಗ ಮಗುಚುತ್ತ , ಪಾತ್ರೆಯ ತಳ ಹಿಡಿಯದಂತೆ ನೋಡಿಕೊಳ್ಳಿ.
- ಪೂರ್ಣವಾಗಿ ಬೆಂದ ಕೂಡಲೇ, ಏಲಕ್ಕಿ ಪುಡಿ ಸೇರಿಸಿ.
- ಬೇಕಾದಲ್ಲಿ ೨ ಚಮಚ ತುಪ್ಪವನ್ನು ಹಾಕಿ.
ಕೃಪೆ: ಸೌಮ್ಯ ಹೆಗಡೆ
No comments:
Post a Comment