ಹರ್ವೆ ಸೊಪ್ಪಿನ ಬಿಸಿ ಬಿಸಿ ಪಲ್ಯ ಮಧ್ಯಾಹ್ನದ ಊಟವನ್ನು ಕಾವೇರಿಸುತ್ತದೆ.
ಬೇಕಾಗುವ ಪದಾರ್ಥಗಳು:
- ಒಂದು ಕಟ್ಟು ಹಸಿಯಾದ ಹರ್ವೆ ಸೊಪ್ಪು
- 2 ಚಮಚ ಅಡುಗೆ ಎಣ್ಣೆ
- ಸಾಸಿವೆ ಕಾಳು -- ಅರ್ಧ ಚಮಚ
- ಸ್ವಲ್ಪ ಅರಿಶಿನ
- ಹಸಿ ಮೆಣಸು - 1
- ಉಪ್ಪು - 1 ಚಮಚ
- 1 ಲೋಟ - ತಣ್ಣೀರು.
- ಹರ್ವೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ.
- ಪಲ್ಯ ಮಾಡಬೇಕೆಂದಿರುವ ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ.
- ಆ ಪಾತ್ರೆಯಲ್ಲಿ, ಸಾಸಿವೆ (1/2 ಚಮಚ) + ಒಂದು ಚಿಟಿಕೆ ಅರಿಶಿನ + 1 ಜಜ್ಜಿದ ಹಸಿ ಮೆಣಸು + 1 ಚಮಚ ಉಪ್ಪು : ಇವೆಲ್ಲವನ್ನು ಹಾಕಿ ಬಿಸಿ ಮಾಡಿ
- ಈಗ ಪಾತ್ರೆಗೆ ಹೆಚ್ಚಿದ ಹರ್ವೆ ಸೊಪ್ಪನ್ನು ಹಾಕಿ. ಚುರ್ ಎಂದು ಶಬ್ದ ಬರುವದು. ಅದಕ್ಕೆ ಹೆದರಬೇಡಿ :)
- ಅಡಿ ಹತ್ತದಿರಲು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ.
- ಹದವಾದ ಗ್ಯಾಸ್ ಬೆಂಕಿಯ ಉರಿಯಲ್ಲಿ ಪಲ್ಯವನ್ನು ಬೇಯಿಸಿ.
- ಪಲ್ಯದ ಪಾತ್ರೆಯನ್ನು ಸೊಟಿನಲ್ಲಿ ಆಗಾಗ ಕದಡುತ್ತಿರಿ.
- 15 ನಿಮಿಷಗಳ ಆಸು ಪಾಸಿನಲ್ಲಿ ನಿಮ್ಮ ಪಲ್ಯ ತಯಾರು.
- ಮಾಡಲು ಬೇಕಾಗುವ ಅಂದಾಜು ಸಮಯ -- 15 ನಿಮಿಷಗಳು.
- ಫ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.
- ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದಷ್ಟು ಮಜ ಜಾಸ್ತಿ...!!!
- ತಿನ್ನುವಾಗ ಪಲ್ಯದಲ್ಲಿ ಹಸಿ ಮೆಣಸನ್ನು ಪ್ರತ್ಯೇಕವಾಗಿ ಗುರುತುಹಿಡಿಯುವದು ಬಹುಕಷ್ಟ. ಹುಷಾರ್ಕೆಯಿಂದ ತಿನ್ನಿ :)
No comments:
Post a Comment