
ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು
ಸರ್ವಿಂಗ್ಸ್ - 4 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಬೇಕಾಗುವ ಸಾಮಗ್ರಿಗಳು:
ಕನ್ನೆಕುಡಿ (ಸೊರಲೆಕುಡಿ) - 25 ಎಲೆಗಳು
ಕಾಳುಮೆಣಸು - 15
ಜೀರಿಗೆ - 3/4 ಚಮಚ
ಒಗ್ಗರಣೆಗೆ ಎಣ್ಣೆ
ಬೆಳ್ಳುಳ್ಳಿ 7 - 8 ಎಸಳು
ಸಾಸಿವೆ - 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ನಿಂಬೆಹಣ್ಣು - 1
ತೆಂಗಿನತುರಿ - 1 ಕಪ್
ಮಾಡುವ ವಿಧಾನ:
ಕನ್ನೆಕುಡಿ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ತೊಟ್ಟು ಮತ್ತು ಎಲೆಯಲ್ಲಿರುವ ನಾರನ್ನು ತೆಗೆದುಬಿಡಿ.
ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಕಾಯಿಸಿ ಕಾಳುಮೆಣಸು ಹಾಕಿ ಚಟಪಟ ಸದ್ದು ಬರುವವರೆಗೆ ಹುರಿಯಿರಿ.
ನಂತರ
ಜೀರಿಗೆ ಸೇರಿಸಿ ಒಮ್ಮೆ ಕೈಯಾಡಿಸಿ, ಕನ್ನೆಕುಡಿ ಎಲೆಗಳನ್ನು ಸೇರಿಸಿ 2 - 3 ನಿಮಿಷ
ಬಾಡಿಸಿ. ಎಲೆಗಳ ಬಣ್ಣ ಬದಲಾಗುತ್ತಿದ್ದಂತೆ ಉರಿಯನ್ನು ಆಫ್ ಮಾಡಿ.
ಹುರಿದ ಸಾಮಗ್ರಿಗಳನ್ನು ತೆಂಗಿನತುರಿಯೊಡನೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
ರುಬ್ಬಿದ ಮಿಶ್ರಣಕ್ಕೆ 3 - 4 ಕಪ್ ನೀರು ಸೇರಿಸಿ ತೆಳ್ಳಗೆ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5 ನಿಮಿಷ ಚೆನ್ನಾಗಿ ಕುದಿಸಿ.
ಕುದಿಸಿ ಇಳಿಸಿದ ನಂತರ ನಿಂಬೆರಸ ಸೇರಿಸಿ. ನಂತರ ಇದಕ್ಕೆ ಸಾಸಿವೆ ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿ.
ಬಿಸಿ ಕಟ್ನೆಯನ್ನು ಅನ್ನದೊಡನೆ ಸರ್ವ್ ಮಾಡಿ. ಇದು ಊಟಕ್ಕೂ ರುಚಿ, ಆರೋಗ್ಯಕ್ಕೂ ಹಿತಕರ.ಟಿಪ್ಸ್:
ನಿಂಬೆರಸದ ಬದಲು ಆಮ್ ಚೂರ್ ಪೌಡರ್ ನ್ನೂ ಬಳಸಬಹುದು. ಆದರೆ ನಿಂಬೆರಸ ಬಳಸುವುದರಿಂದ ಕಟ್ನೆಗೆ ವಿಶೇಷ ಪರಿಮಳ ಬರುತ್ತದೆ.
By : Vani Hegde (http://vanilohit.blogspot.in)
No comments:
Post a Comment