ಹಸಿ ಜೀರಿಗೆ ತಂಬುಳಿ

ಬೇಕಾಗುವ ಪದಾರ್ಥಗಳು:
  • ಹಸಿ ಜೀರಿಗೆ 1 ಚಮಚ, 
  • ತೆಂಗಿನ ತುರಿ 2 -3 ಚಮಚ, 
  • ಕಡೆದ ಮಜ್ಜಿಗೆ-1/2 ಲೀಟರ್, 
  • ಉಪ್ಪು- ರುಚಿಗೆ ತಕ್ಕಷ್ಟು. 

ಮಾಡುವ ವಿಧಾನ:
  • ಜೀರಿಗೆ, ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. 
  • ಇದಕ್ಕೆ ಮಜ್ಜಿಗೆ ಹಾಗೂ ಉಪ್ಪು ಸೇರಿಸಿ ಹದ ಮಾಡಿ. 

ಉಪಯೋಗಗಳು:
  • ಅನ್ನದೊಂದಿಗೆ ತಿನ್ನಲು ಅತ್ಯಂತ ರುಚಿ. ತೆಳ್ಳಗೆ ಮಾಡಿದರೆ ಕುಡಿಯಲು ಹಿತಕರ. 
  • ಹೊಟ್ಟೆಯ ವಾಯು, ಉಬ್ಬರ ಹಾಗೂ ಇನ್ನಿತರ ಜೀರ್ಣ ಸಂಬಂಧೀ ತೊಂದರೆಗಳಿಗೆ ರಾಮಬಾಣ.

ಕೃಪೆ: ಕವಿತಾ ಭಟ್, ಹಾಸನ.

ಅರಿಸಿನ ಕೊಂಬಿನ ಗೊಜ್ಜು ಅಥವಾ ಬಾಳಂತಿ ಗೊಜ್ಜು


ಬೇಕಾಗುವ ಪದಾರ್ಥಗಳು:


  • ಹಸಿ ಅರಿಸಿನ ಕೊಂಬು ಅಥವಾ ಬೇರು - ೧ ಕಪ್
  • ಉಪ್ಪು -  ೧ ಚಮಚ (ರುಚಿಗೆ ತಕ್ಕಷ್ಟು)
  • ಬೆಲ್ಲ - ಅರ್ಧ ಕಪ್ (ರುಚಿಗೆ ತಕ್ಕಷ್ಟು) 
  • ಹುಳಿಸೆ ಹಣ್ಣು - ಸುಲಿದ ಅಡಿಕೆಯಷ್ಟು ಪ್ರಮಾಣ.
  • ಕಾಯಿತುರಿ - ೧ ಕಪ್
  • ಒಣಮೆಣಸು - ೫
  • ಕೊತ್ತುಂಬರಿ ಕಾಳು - ೧ ಚಮಚ 
  • ಉದ್ದಿನಬೇಳೆ - ೧ ಚಮಚ
  • ಹಿಂಗು - ೧ ಕಡಲೆಕಾಳಿನಷ್ಟು
  • ಎಣ್ಣೆ - ಸ್ವಲ್ಪ ಕೊಬ್ಬರಿ ಎಣ್ಣೆ.


ಮಾಡುವ ವಿಧಾನ:


  • ಅರಿಸಿನ ಬೇರನ್ನು ಸಣ್ಣಗೆ ಹೆಚ್ಚಿ ಅದಕ್ಕೆ + ಉಪ್ಪು + ಬೆಲ್ಲ + ಹುಳಿಸೆ ಹಣ್ಣು +  ೨ ಕಪ್ ನೀರು ಹಾಕಿ - ಅದನ್ನು ಬಾಂಡ್ಲಿಯಲ್ಲಿ ಹದವಾಗಿ ಬೇಯಿಸಿ.
  • ಹುರಿದ ಪದಾರ್ಥ: ಇನ್ನೊಂದು ಪಾತ್ರೆಯಲ್ಲಿ -  ಕೊತ್ತುಂಬರಿ ಕಾಳು + ಸಲ್ಪ ಎಣ್ಣೆ + ಹಿಂಗು + ಉದ್ದಿನಬೇಳೆ -- ಇವನ್ನು ಹಾಕಿ ಹುರಿದು ಇಟ್ಟುಕೊಳ್ಳಿ.
  • ಬೇಯಿಸಿ ತಣ್ಣಗಾಗಿಸಿದ ಅರಿಸಿನ ಮಿಶ್ರಣ + ಹುರಿದ ಪದಾರ್ಥ + ಮೆಣಸು + ಕಾಯಿತುರಿ -- ಇವನ್ನು ಮಿಕ್ಸಿಗೆ ಹಾಕಿ ಬೀಸಿ.
  • ಈಗ ನಿಮ್ಮ ಅರಿಸಿನ ಕೊಂಬಿನ ಗೊಜ್ಜು ತಯಾರು.
  • ಬೀಸಿದ ಗೊಜ್ಜನ್ನು ಬಾಣೆಲೆಯಲ್ಲಿ ಹಾಕಿ ಕುದಿಸಿದರೆ ೨-೩ ದಿನ ಇಟ್ಟರೂ ಕೆಡುವದಿಲ್ಲ.   


ಉಪಯೋಗಗಳು:

  • ಇದು ಶರೀರದ ನಂಜನ್ನು ತೆಗೆಯುತ್ತದೆ ಆದಕಾರಣ ಬಾಳಂತಿಯರಿಗೆ ವಿಶೇಷವಾಗಿ ಕೊಡುತ್ತಾರೆ. 
  • ಇದಕ್ಕೆ ಬಾಳಂತಿ ಗೊಜ್ಜು ಎಂದೂ ಕರೆಯುತ್ತಾರೆ.
  • ಮೈ ತುರಿಸುವಿಕೆಗೂ ಉಪಯುಕ್ತ.


ಕೃಪೆ: ಕಲಾವತಿ ಶಾಂತಾರಮ ಭಟ್ ಮುರೂರು, ಧಾರವಾಡ.

ಮುರುಗಲು ಹುಳಿ ಸಾರು

ಬೇಕಾಗುವ ಪದಾರ್ಥಗಳು :

  • ಒಣಗಿಸಿ ಇಟ್ಟ ಮುರುಗುಲ ಹಣ್ಣಿನ ಸಿಪ್ಪೆ - 8
  • ನೀರು - 1 Litre
  • ನೀರು ಬೆಲ್ಲ - 1/2 ಕಪ್.
  • ಉಪ್ಪು - ರುಚಿಗೆ ತಕ್ಕಷ್ಟು.
  • ಜೀರಿಗೆ - 1/2 ಚಮಚ.
  • ಇಂಗು - 2 ಚಿಟಿಕೆ.
  • ತುಪ್ಪ - 1 ಚಮಚ
  • ಕರಿಬೇವು - 5 ಎಸಳು.

ಮಾಡುವ ವಿಧಾನ :

  • ಮುರುಗುಲು ಹಣ್ಣಿನ ಸಿಪ್ಪೆಯನ್ನು ನೀರಿಗೆ ಹಾಕಿ ೧೦ ನಿಮಿಷ ನೆನೆಸಿ.
  • ನಂತರ ಅದಕ್ಕೆ ಬೆಲ್ಲ + ಉಪ್ಪು ಹಾಕಿ ೧೦ ನಿಮಿಷ ಕುದಿಸಿ.
  • ಒಗ್ಗರಣೆ:  ತುಪ್ಪ + ಇಂಗು + ಜೀರಿಗೆ ಹಾಕಿ ಒಗ್ಗರಣೆ ಮಾಡಿ. (ಜೀರಿಗೆ ಬದಲಿಗೆ ಬದಲಿಗೆ 4 ಎಸಳು ಬೆಳ್ಳುಳ್ಳಿಯನ್ನು ಒಗ್ಗರಣೆಯಲ್ಲಿ ಬಳಸಬಹುದು)
  • ಈಗ ಕುದಿಯುತ್ತಿರುವ ಸಾರಿಗೆ ಒಗ್ಗರಣೆ ಹಾಕಿ, ಒಂದು ಕುದಿ ತರಿಸಿ ಗ್ಯಾಸನ್ನು ಬಂದು ಮಾಡಿ.
  • ಬೇಕಾದರೆ ಕುದಿಯುವಾಗ ಸಾರಿಗೆ ಕರಿಬೇವನ್ನು ಹಾಕಿ ಕುದಿಸಬಹುದು. 
  • ಖಾರ ಬೇಕಾದವರು ಸಾರು ಕುದಿಯುವಾಗ 1/2 ಚಮಚ ಕೆಂಪುಮೆಣಸಿನ ಹುಡಿ ಹಾಕಬಹುದು.
  • ಈಗ ಮುರುಗಲು ಹುಳಿ  ಸಾರು ಸವಿಯಲು ತಯಾರು. :)

ಇತರೆ ಮಾಹಿತಿ:

  • ನೆಗಡಿ, ಜ್ವರಕ್ಕೆ ಒಳ್ಳೆಯ ಮದ್ದು.



ಕೃಪೆ: ಆಶಾ. R. ಭಟ್, ಕುಮಟಾ

ಓಮ ಕಾಳಿನ ಗೊಜ್ಜು

ಓಮ ಕಾಳಿನ ಗೊಜ್ಜು  

ಬೇಕಾಗುವ ಸಾಮಗ್ರಿಗಳು :
ಓಮದ ಕಾಳು (ಅಜವಾನ) 2 ಚಮಚ
ಒಣಮೆಣಸಿನಕಾಯಿ 6-7 ( ಖಾರ ಹೆಚ್ಚು ಬೇಕಾದ್ರೆ 2 ಹೆಚ್ಚು )
ತೆಂಗಿನ ತುರಿ 8-10 ಚಮಚ
ಹುಣಸೆಹಣ್ಣು, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ :-
ಮೊದಲು ಓಮದ ಕಾಳನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ.
ನಂತರ ಸ್ವಲ್ಪ ಎಣ್ಣೆ ಹಾಕಿ ಒಣಮೆಣಸು ಹುರಿದುಕೊಳ್ಳಿ.
ಕಾಯಿತುರಿ, ಓಮ, ಒಣಮೆಣಸು, ಹುಣಸೆಹಣ್ಣು, ಉಪ್ಪು ಎಲ್ಲವನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ.
ಬಿಸಿ ಬಿಸಿ ಅನ್ನದ ಜೊತೆ ಗಟ್ಟಿಯಾಗಿ ಕಲೆಸಿಕೊಂಡು ಊಟ ಮಾಡಿ.

ಉಪಯೋಗ
ಓಮ ಹಸಿವನ್ನು ಹೆಚ್ಚಿಸುತ್ತದೆ. ಜ್ವರ ಬಂದು ಬಾಯಿರುಚಿ ಕೆಟ್ಟಾಗ ಈ ಗೊಜ್ಜು ಕಲೆಸಿಕೊಂಡು ಊಟ ಮಾಡಿದರೆ ಎರಡು ತುತ್ತು ಹೆಚ್ಚು ತಿನ್ನಬಹುದು.
 
ಕೃಪೆRecipe by : Sandhya HEGDE

ನೀರು ದೋಸೆ (Neer Dosa)

 
ಬೇಕಾಗುವ ಪದಾರ್ಥಗಳು:
  • 2 ಲೋಟ ಅಕ್ಕಿ.
  • 1 ಲೋಟ ಕಾಯಿತುರಿ.
  • ಉಪ್ಪು.

ಮಾಡುವ ವಿಧಾನ:
  • ಅಕ್ಕಿಯನ್ನು 8 ತಾಸು ನೀರಲ್ಲಿ ನೆನೆಸಿ ಇಡಿ.
  • ನಂತರ ಅಕ್ಕಿಗೆ ಕಾಯಿ ತುರಿಯನ್ನು ಹಾಕಿ ಮಿಕ್ಸಿಯಲ್ಲಿ ಬೀಸಿ.
  • 2 ಸ್ಪೂನ್ ಉಪ್ಪನ್ನು ಹಾಕಿ.
  • ದೋಸೆಯ ಹಿಟ್ಟು ನೀರುನೀರಾಗುವಷ್ಟು ನೀರನ್ನು ಹಾಕಿ.
  • ಈಗ ತೆಳ್ಳಗಾಗಿ ಪದರು ಬರುವಂತೆ ದೋಸೆಯನ್ನು ಬಂಡಿಯಲ್ಲಿ ಎರೆಯಿರಿ.
  • ಈಗ ನಿಮ್ಮ ನೀರ್ ದೋಸೆ ಸವಿಯಲು ರೆಡಿ ಆಗಿ!!!
 ಉಪಯುಕ್ತ ಮಾಹಿತಿ : 
  • ಇದಕ್ಕೆ ತೆಳ್ಳವ್ ದೋಸೆ ಎಂದೂ ಎನ್ನುತ್ತಾರೆ.
  • ಕಾಯಿಸಿದ ಜೋನಿ ಬೆಲ್ಲದ (ಆಲೆಮನೆ ಬೆಲ್ಲ) ಜೊತೆ ತಿಂದರೆ ಸವಿ ದುಪ್ಪಟ್ಟು.
  • ಎಷ್ಟು ಹೊತ್ತು ಕಾಯಿಸಿದರೂ ನೀರು ದೋಸೆ ಕೆಂಪಗಾಗುವದಿಲ್ಲ. ಆದ್ದರಿಂದ ದೋಸೆ ಬೆಂದಿದಿಯೋ ಇಲ್ಲವೋ ಎಂಬುದನ್ನು ನೀವೇ ಅಂದಾಜಿನ ಮೇಲೆ ನಿರ್ಧರಿಸಬೇಕು.
  • ಮೊದಲನೆಯ ನೀರು ದೋಸೆ ಸರಿಯಾಗಿ ಬೇಯುವದಿಲ್ಲ ಅಥವಾ ಏಳುವದಿಲ್ಲ. ಆದ್ದರಿಂದ ಮೊದಲ ದೋಸೆ ಸರಿ ಆಗಿಲ್ಲವೆಂದು ಧೃತಿಗೆಡಬೇಡಿ!!. ಅದನ್ನು ದೇವರಿಗೆ ಬಿಟ್ಟು ಮತ್ತೆ ಪ್ರಯತ್ನಿಸಿ:)
  • ಮಾಡಲು ಬೇಕಾಗುವ ಅಂದಾಜು ಸಮಯ - ದೋಸೆಗಳ ಸಂಖ್ಯೆ x 3 ನಿಮಿಷ/ದೋಸೆ. 
 ಚಿತ್ರ ಕೃಪೆ: ವಿಕಿಪೀಡಿಯಾ
 

ಕಣಲೆ ಪಲ್ಯ (Kanale palya)


ಬೇಕಾಗುವ ಪದಾರ್ಥಗಳು:

  • ಸಣ್ಣಗೆ ಹೆಚ್ಚಿದ ಕಣಲೆ - 2 ಕಪ್(ಬಿದಿರಿನ ಮೊಳಕೆ)
  • ಕಡಲೆ -1/2ಕಪ್(ನೆನೆಸಿದ ಕಡಲೆ)
  • ಈರುಳ್ಳಿ - 1
  • ಹಸಿ ಮೆಣಶಿನ ಕಾಯಿ-2
  • ಎಣ್ಣೆ - 2 ಚಮಚ
  • ಇಂಗು - 1 ಚಿಟಿಕೆ
  • ಅರಸಿಣ - ಸ್ವಲ್ಪ
  • ಸಾಸಿವೆ - ಸ್ವಲ್ಪ
  • ಕರಿಬೇವು - ಸ್ವಲ್ಪ
  • ನಿಂಬೆರಸ - 1ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ತೆಂಗಿನ ತುರಿ-ಸ್ವಲ್ಪ(ಬೇಕಾದರೆ ಮಾತ್ರ)

ಮಾಡುವ ವಿಧಾನ:
  • ಬಾಣೆಲೆಯಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ, ಕತ್ತರಿಸಿದ ಹಸಿಮೆಣಸು, ಕರಿಬೇವು ಹಾಕಿ.
  • ಬಳಿಕ ಹೆಚ್ಚಿಟ್ಟ ಕಣಲೆ, ಕಡಲೆ,ಅರಿಸಿಣ, ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಕೈಯಾಡಿಸಿ.
  • ನಂತರ ಸ್ವಲ್ಪ ಉರಿ ಕಡಿಮೆ ಮಾಡಿ ಪ್ಲೇಟ್ ಮುಚ್ಚಿಡಿ, ಆಗಾಗ ಕೈಯಾಡಿಸುತ್ತಿರಿ. 
  • 20 ನಿಮಿಷದ ಬಳಿಕ ಒಂದು ಹದಕ್ಕೆ ಕಣಲೆ ಹಾಗೂ ಕಡಲೆ ಬೆಂದ ಬಳಿಕ ಅದಕ್ಕೆ ಈರುಳ್ಳಿ ಸೇರಿಸಿ. 
  • ಉರಿ ಕಡಿಮೆ ಮಾಡಿ ಎಲ್ಲವೂ ಚೆನ್ನಾಗಿ ಹುರಿಯುವ ವರೆಗೆ ಕೈಯಾಡಿಸುತ್ತಿರಿ. ಹುರಿದ ಬಳಿಕ ಉರಿಯಾರಿಸಿ. 
  • ಅದಕ್ಕೆ ನಿಂಬೆರಸ ಸೇರಿಸಿ. ನಿಮಗೆ ಇಷ್ಟವಾಗುವಂತಿದ್ದಲ್ಲಿ ತೆಂಗನ ತುರಿ ಸೇರಿಸಬಹುದು. 
  • ಈಗ ರುಚಿ ರುಚಿಯಾದ ಕಣಲೆ ಪಲ್ಯ ಸವಿಯಲು ಸಿದ್ಧ

ಉಪಯುಕ್ತ ಮಾಹಿತಿ :


ಕೃಪೆRecipe by : Satish Shanbhag

ಹಲಸಿನ ಹಣ್ಣಿನ ಪಾಯಸ



ಬೇಕಾಗುವ ಪದಾರ್ಥಗಳು:
  • ಲೋಟ ಹಲಸಿನ ಸೊಳೆ 
  • ರವೆ  1/4 ಕಪ್
  • ಬೆಲ್ಲ / ಸಕ್ಕರೆ - 1 ಕಪ್
  • ರುಬ್ಬಿದ ಕಾಯಿತುರಿ  1 ಕಪ್
  • 4 ಲೋಟ ನೀರು

ಮಾಡುವ ವಿಧಾನ:
  • ರವೆಗೆ 4 ಲೋಟ ನೀರು ಹಾಕಿ ಕಾಯಿಸಿ.
  • ಅದಕ್ಕೆ ಹಲಸಿನ ಸೊಳೆ + ಬೆಲ್ಲ ಅಥವಾ ಸಕ್ಕರೆ + ಕಾಯಿತುರಿ ಹಾಕಿ ನಿಧಾನವಾಗಿ ಕುದಿಸಿ


ಉಪಯುಕ್ತ ಮಾಹಿತಿ :

ಮಾಡಲು ಬೇಕಾಗುವ ಅಂದಾಜು ಸಮಯ -- 15 ನಿಮಿಷಗಳು.

ಕೃಪೆ: Satish Shanbhag, Valagalli, Kumta