- ಉಪ್ಪು
- ಅಕ್ಕಿ
- ಆಲೆಮನೆ ಬೆಲ್ಲ
ಮಾಡುವ ವಿಧಾನ:
- ಅಕ್ಕಿಯನ್ನು ಒಂದೆರಡು ಗಂಟೆ ನೆನೆಸಬೇಕು.
- ನಂತರ ಅಕ್ಕಿಯನ್ನು ದೋಸೆ ಹಿಟ್ಟಿನ ಹದಕ್ಕೆ ಬೀಸಿ.
- ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು + ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಪಾತ್ರೆಯನ್ನು ಒಲೆಯ ಮೇಲಿಟ್ಟು, ಮಿಶ್ರಣ ಗಟ್ಟಿಯಾಗುವವರೆಗೆ ಕಲಕಬೇಕು.
- ಮಿಶ್ರಣವನ್ನು ಉಂಡೆಯಾಕಾರ ಮಾಡಿ, ಕುಕ್ಕರ್ ನಲ್ಲಿಟ್ಟು, (ಕುಕ್ಕರ್ ನ ವೇಟ್ ಹಾಕಬೇಡಿ) ಉಗಿ ಬರುವವರೆಗೆ ಇಡಬೇಕು.
- ಈಗ ಶಾವಿಗೆ ಒರಳಿನಲ್ಲಿ ಹಾಕಿದರೆ ಸಿಹಿ ಶಾವಿಗೆ ರೆಡಿ.
ಉಪಯುಕ್ತ ಮಾಹಿತಿ :
ಬಿಸಿಯಾಗಿದ್ದಾಗ ತುಪ್ಪ ಅಥವಾ ಉಪ್ಪಿನಕಾಯಿಯೊಂದಿಗೆ ಸವಿಯಲು ಬಲು ರುಚಿ...:)
ಕೃಪೆ: Sharavathi S Raysad,Vaddinakoppa,Sirsi
No comments:
Post a Comment