ಶಂಕರ ಪೊಳೆ (Shankar Pole)
ಬೇಕಾಗುವ ಪದಾರ್ಥಗಳು:
- ಮೈದಾ ಹಿಟ್ಟು - ೧ ಲೋಟ
- ಉಪ್ಪು - ರುಚಿಗೆ
- ಸಕ್ಕರೆ - ೧ ಚಮಚ
- ಮೆಣಸಿನ ಹಿಟ್ಟು - ೨ ಚಮಚ
ತಯಾರಿಸುವ ವಿಧಾನ:
- ಮೈದಾ ಹಿಟ್ಟನ್ನು ಬಿಸಿ ನೀರಿನಲ್ಲಿ ಉಪ್ಪು, ಸಕ್ಕರೆ ಮತ್ತು ಮೆಣಸಿನ ಹಿಟ್ಟು ಹಾಕಿ ಹದವಾಗಿ ಕಲಸಿಕೊಳ್ಳಿ.
- ಇದನ್ನು ರೊಟ್ಟಿ ಯಂತೆ ಲಟ್ಟಿಸಿಕೊಳ್ಳಿ.
- ಬಾಟಲಿಯ ಮುಚ್ಚಳದಲ್ಲಿ ಕತ್ತರಿಸಿ.
- ಹದವಾಗಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಇತರೆ ಮಾಹಿತಿಗಳು :
- ಮೈದಾ ಹಿಟ್ಟಿನ ಬದಲು ಗೋಧಿಹಿಟ್ಟನ್ನು ಉಪಯೋಗಿಸಬಹುದು.
- ಸಾಮಾನ್ಯವಾಗಿ ಮಾಡುವ ಚಪಾತಿ ಅಥವಾ ರೊಟ್ಟಿ ಗಿಂತ ಸ್ವಲ್ಪ ದಪ್ಪವಾಗಿ ಲಟ್ಟಿಸಿಕೊಂಡರೆ ತಿನ್ನಲು ರುಚಿಯಾಗಿರುತ್ತದೆ.
- ಮೆಣಸಿನ ಹಿಟ್ಟನ್ನು ಹಾಕದಿದ್ದರೂ ಚೆನ್ನಾಗಿಯೇ ಇರುತ್ತದೆ.
- ಮನೆಯಲ್ಲಿ 'ಚಿರಣಿ' ಇದ್ದರೆ ಬಾಟಲಿಯ ಮುಚ್ಚಳದ ಬದಲಿಗೆ ಉಪಯೋಗಿಸಿದರೆ ವಜ್ರಾಕೃತಿಯ ಅಥವಾ ಚೌಕಾಕೃತಿಯ ಶಂಕರ ಪೊಳೆ ಮಾಡಬಹುದು.
ಕೃಪೆ: ಅಂಬಿಕಾ ಭಟ್
No comments:
Post a Comment