ಬೇಕಾಗುವ ಸಾಮಗ್ರಿಗಳು
- ಬಾಳೆಹಣ್ಣು (ನೇಂದ್ರ) - ೫-೬ (ಮಧ್ಯಮ ಗಾತ್ರ)
- ಗೋಧಿ ಹಿಟ್ಟು - ೨ ಕಪ್
- ಉಪ್ಪು - ರುಚಿಗೆ
- ಅಡುಗೆ ಎಣ್ಣೆ - ೧/೨ ಕಪ್
ಮಾಡುವ ವಿಧಾನ
- ಬಾಳೆಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿ.
- ಇದಕ್ಕೆ ಗೋಧಿ ಹಿಟ್ಟು, ಉಪ್ಪು, ೨ ಚಮಚ ಎಣ್ಣೆ ಹಾಕಿ ಮೃದುವಾಗಿ ರೊಟ್ಟಿಯ ಹದಕ್ಕೆ ಕಲಸಿ. ಬೇಕಾದಲ್ಲಿ ಸ್ವಲ್ಪ ನೀರು ಹಾಕಿ ಕಲಸಿ.
- ನಂತರ, ಸಣ್ಣ ಉಂಡೆಗಳನ್ನಾಗಿ ಮಾಡಿ, ಲಟ್ಟಿಸಿ, ಸಣ್ಣ ಉರಿಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಎರಡೂ ಬದಿಗೆ ಬೇಯಿಸಿ.
ಉಪಯುಕ್ತ ಮಾಹಿತಿ :
- ಇದಕ್ಕೆ ಜೋನಿ ಬೆಲ್ಲ ಮತ್ತು ತುಪ್ಪ ಒಳ್ಳೆಯ ಜೋಡಿ.
- ತೆಂಗಿನಕಾಯಿ ಚಟ್ನಿಯ ಜೊತೆಯೂ ಸವಿಯಬಹುದು.
ಕೃಪೆ: ಸೌಮ್ಯ ಹೆಗಡೆ
hey have u really tried this?? because we need another 2 cups of maida . i struggled during kneading the dough. revise the measurements u mentioned!!!! thanks for recipe
ReplyDelete