ಪಾಲಕ್ ಸೊಪ್ಪಿನ ತಂಬಳಿ




ಬೇಕಾಗುವ ಪದಾರ್ಥಗಳು : 
  • ಪಾಲಕ್ ಸೊಪ್ಪು - ಒಂದು ಕಟ್ಟು.
  • ಜೀರಿಗೆ- 2 tbs
  • ಕಾಳು ಮೆಣಸು - 3
  • ಹಸಿ ಮೆಣಸು- 1
  • ಮೊಸರು - 1 ಕಪ್
  • ನೀರು ಬೆಲ್ಲ - 1/2 tbs
  • ಅಡುಗೆ ಎಣ್ಣೆ - 1 tbs
  • ಕಾಯಿ ತುರಿ - 3 tbs
  • ರುಚಿಗೆ ಬೇಕಷ್ಟು ಉಪ್ಪು
ಮಾಡುವ ವಿಧಾನ :
  • 1 ಚಮಚ ಅಡುಗೆ ಎಣ್ಣೆ + ಸ್ವಲ್ಪ ಜೀರಿಗೆ + ಜಜ್ಜಿದ ಹಸಿ ಮೆಣಸು ಅಥವಾ ಕಾಳು ಮೆಣಸು : ಇವನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ.
  • ಚೆನ್ನಾಗಿ ತೊಳೆದು ಕತ್ತರಿಸಿದ ಪಾಲಕ್ ಸೊಪ್ಪನ್ನು ಬಾಂಡ್ಲಿಗೆ ಹಾಕಿ.
  • ಹದವಾದ ಬೆಂಕಿಯ ಉರಿಯಲ್ಲಿ 5-6 ನಿಮಿಷ ಬೇಯಿಸಿ (ಸೊಪ್ಪು ಬೇಯುವವರೆಗೆ)
  • ಗ್ಯಾಸ್ ಬಂದು ಮಾಡಿ, ಬಾಂಡ್ಲಿ ತಂಪಾಗಲು ಬಿಡಿ.
  • ಈ ಮಿಶ್ರಣ + 3 tbs ಕಾಯಿತುರಿ + ನೀರು ಬೆಲ್ಲ + ಉಪ್ಪು + ಸ್ವಲ್ಪ ನೀರು :: ಎಲ್ಲ ಹಾಕಿ ಮಿಕ್ಸಿಯಲ್ಲಿ ರುಬ್ಬಿ.
  • ಈ ಮೇಲಿನ ಮಿಶ್ರಣವನ್ನು ಮೊಸರಿಗೆ ಹಾಕಿ.(ಮೊಸರನ್ನು ಹಾಕಿಯೂ ಮಿಕ್ಸಿಯಲ್ಲಿ ರುಬ್ಬಬಹುದು)
  • ಪಾಲಕ್ ಸೊಪ್ಪಿನ ತಂಬಳಿ ತಯಾರು ...

ಇತರೆ ಮಾಹಿತಿ:  

  • ಮಾಡಲು ಬೇಕಾಗುವ ಸಮಯ 10 ನಿಮಿಷ.   
  • ಇದನ್ನು ಪ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.
  • ಇದನ್ನು ಸೋಸಿ ಕುಡಿಯಲೂ ಬಳಸಬಹುದು.

5 comments:

  1. ತ೦ಬ್ಳಿಗೆ ಸಕ್ಕರೆ ಬದಲು (ನೀರ್) ಬೆಲ್ಲ ಹಾಕಿರೆ ದೇಹಕ್ಕೆ ಒಳ್ಳೆದು....

    ReplyDelete
  2. ಕೊಬ್ಬರಿ ತುರಿ ಹಾಕಿ ಮಾಡಿದ್ರೇ ಇನ್ನೂ ಚೆನ್ನಾಗಿರುತ್ತದೆ

    ReplyDelete
  3. This comment has been removed by a blog administrator.

    ReplyDelete
  4. ಕೊಬ್ಬರಿ ತುರಿ ಹಾಕಿ ಮಾಡಿದ್ರೇ ಇನ್ನೂ ಚೆನ್ನಾಗಿರುತ್ತದೆ

    ReplyDelete
  5. ಕೊಬ್ಬರಿ ತುರಿ ಹಾಕಿ ಮಾಡಿದ್ರೇ ಇನ್ನೂ ಚೆನ್ನಾಗಿರುತ್ತದೆ

    ReplyDelete